ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ನಡೆದ ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದ್ದು ಹೊನ್ನಾವರ ಗುಂಡಿಬೈಲ್ ಸ.ಹಿ.ಪ್ರಾಥಮಿಕ ಶಾಲೆಯ ಶಿಕ್ಷಕ ಗಣಪತಿ ಎಸ್. ಹೆಗಡೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಭಟ್ಕಳ ತಾಲೂಕಿನ ಹೊನ್ನೆಮಡಿ ಸ.ಹಿ.ಪ್ರಾಥಮಿಕ ಶಾಲೆಯ ಶಿಕ್ಷಕ ರಾಘವೇಂದ್ರ ಮಡಿವಾಳ ದ್ವಿತೀಯಾ ಸ್ಥಾನ ಹಾಗೂ ನ್ಯೂ ಶಮ್ಸ್ ಶಾಲೆಯ ಸಾವಿತ್ರಿ ಹೆಗಡೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಹೊನ್ನಾವರ ತಾಲೂಕಿನ ಸ್ಥಿತಿಗಾರ ಸ.ಹಿ.ಪ್ರಾಥಮಿಕ ಶಾಲೆಯ ಎಮ್.ಎಸ್.ಹೆಗಡೆ(ಗಾಳಿ), ಹೇರಂಗಡಿಯ ಸಿ.ಆರ್.ಪಿ ತ್ರಿವೇಣಿ ಜಿ.ಶಾಸ್ತ್ರಿ, ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ವಿದ್ಯಾ ವಿ.ನಾಯ್ಕ, ರಕ್ಷಿತಾ ದುರ್ಗಪ್ಪ ನಾಯ್ಕ, ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ರಕ್ಷಾ ಭಾಸ್ಕರ್ ಪೈ, ಶಿರಸಿಯ ಗಾಂಧಿನಗರ ಸ.ಹಿ.ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಜೇಶ್ವರಿ ಹೆಗಡೆ ನಿರ್ಣಯಕರ ಮೆಚ್ಚುಗೆ ಪಡೆದು ಸಮಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
>ಪ್ರಥಮ: ಜಿ.ಎಸ್.ಹೆಗಡೆ ಹೊನ್ನಾವರ. >ದ್ವಿತೀಯಾ: ರಾಘವೇಂದ್ರ ಮಡಿವಾಳ ಭಟ್ಕಳ. >ತೃತೀಯಾ: ಸಾವಿತ್ರಿ ಹೆಗಡೆ ಭಟ್ಕಳ |
ವಿಜೇತರಿಗೆ ಜ.4ರಂದು ಬೆಳಿಗ್ಗೆ 10:30ಗಂಟೆಗೆ ಸಾಗರ್ ರಸ್ತೆಯಲ್ಲಿರುವ ನ್ಯೂ ಇಂಗ್ಲಿಷ್ ಪಿ.ಯು.ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ರೂ.5000, ದ್ವಿತೀಯಾ ರೂ.3000, ತೃತೀಯಾ ಬಹುಮಾನ ರೂ.2000 ಹಾಗೂ ರೂ.500 ಸಮಾಧಾನಕರ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ಅಂಚೆ ಮೂಲಕ ರವಾನಿಸಲಾಗುವುದು. ವಿಜೇತರು ಕಾರ್ಯಕ್ರಮದಲ್ಲಿ ಸಕಾಲಕ್ಕೆ ಬಂದು ಬಹುಮಾನ ಸ್ವೀಕರಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.