ಆಯುಷ್ ಇಲಾಖೆಯಿಂದ ನೆರೆ ಸಂತೃಸ್ತರಿಗೆ ಔಷಧಿ ವಿತರಣೆ

Source: sonews | By Staff Correspondent | Published on 13th August 2019, 6:12 PM | Coastal News | Public Voice | Don't Miss |

ಉತ್ತರಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಹಾನಿಗೊಳಗಾದ ನೆರೆ ಸಂತ್ರಸ್ತ ಪ್ರದೇಶಗಳಿಗೆ ಜಿಲ್ಲಾ ಆಯುಷ ಅಧಿಕಾರಿಗಳಾದ  ಡಾ ಲಲಿತಾ ಶೆಟ್ಟಿ ನೇತೃತ್ವದಲ್ಲಿ ಆಯುಷ ವೈದ್ಯರ  ತಂಡವು ಕಾರವಾರ ಮತ್ತು ಅಂಕೋಲಾ ತಾಲ್ಲುಕಿನ ಹಲವಾರು ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೆ ದಿನಾಂಕ 9-8-2019,10-8-2019, 11-8-2019 ರಂದು ಮತ್ತು ದಿನಾಂಕ 12-8-2019 ರಂದು ಭೇಟಿ ನೀಡಿ  ನೆರೆ ಸಂತ್ರಸ್ತರಿಗೆ ಚಿಕಿತ್ಸೆ ಹಾಗೂ ಆಯುಷ ಔಷಧಿಗಳನು ವಿತರಿಸಲಾಯಿತು.

ನೆರೆ ಸಂಧರ್ಬದಲ್ಲಿ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಾಯಿತು. ಈ ಭೇಟಿಯ ಸಂದರ್ಭದಲ್ಲಿ ಜಿಲ್ಲಾ ಆಯುಷ ಅಧಿಕಾರಿಗಳ ಕಚೇರಿಯ ಎಲ್ಲ ಸಿಬ್ಬಂದಿಗಳು,ಮತ್ತು  ಡಾ ವಾಹಿನಿ ಆರ್ ನಾಯ್ಕ , ಹಿರಿಯ ವೈದ್ಯಾಧಿಕಾರಿಗಳು ಜಿಲ್ಲಾ ಸರಕಾರಿ ಆಯುರ್ವೇದ ಆಸ್ಪತ್ರೆ ಕಾರವಾರಡಾ ಸಂಗಮೇಶ ಪರಂಡಿ, ತಜ್ಞ ವೈದ್ಯರು, ಜಿಲ್ಲಾ ಸರಕಾರಿ ಆಯುವೇದ ಆಸ್ಪತ್ರೆ ಕಾರವಾರ, ಡಾ ಮಲ್ಲಿಕಾರ್ಜುನ ಹೀರೇಮಠ ಯುನಾನಿ ವೈದ್ಯರು, ಜಿಲ್ಲಾ ಆಸ್ಪತ್ರೆ ಕಾರವಾರ  ಮತ್ತು ಆಯುವರ್ಗೇದ ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರದೊಂದಿಗೆ ದಿನಾಂಕ 9-8-2019 ರಂದು  ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳಾದ ಸಾಗರ ದರ್ಶನ ಹಾಲ್,ಕಡವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಹಿ ಪ್ರಾ ಶಾಲೆ ಸಾಸನವಾಡಾ, ರಾಮಸತಿ ದೇವಸ್ಥಾನ ಸಾಸನವಾಡಾ, ಹಿ ಪ್ರಾ ಶಾಲೆ ಕಡವಾಡ,ಕಿ ಪ್ರಾ ಶಾಲೆ ಮದ್ರಾಳಿ,ದಿನಾಂಕ 10-8-2019 ರಂದು  ಹಿ ಪ್ರಾ ಶಾಲೆ ಹಣಕೋಣ, ಸಾತೇರಿ ದೇವಸ್ಥಾನ ಹಾಲ್, ಹಿ ಪ್ರಾ ಶಾಲೆ ಉಳಗಾ, ಹಿ ಪ್ರಾ ಶಾಲೆ ದೋಲ, ಹಿ ಪ್ರಾ ಶಾಲೆ ಹಳಗಾ, ಮೋಡರ್ನ ಸ್ಕೂಲ ಹಳಗಾ, ಹಿ ಪ್ರಾ ಶಾಲೆ  ಅತ್ರಿ, ಬೈರಾ ಸಾಗರ ದರ್ಶನ ಹಾಲ್,ಕಡವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಹಿ ಪ್ರಾ ಶಾಲೆ ಸಾಸನವಾಡಾ, ರಾಮಸತಿ ದೇವಸ್ಥಾನ ಸಾಸನವಾಡಾ, ಹಿ ಪ್ರಾ ಶಾಲೆ ಕಡವಾಡ, ಗ್ರಾಮಗಳಿಗೆ ಬೇಟಿ ನೀಡಿ, ದಿನಾಂಕ 11-8-2019 ರಂದು ಸಾಗರ ದರ್ಶನ ಹಾಲ್,ಕಿನ್ನರ ಗ್ರಾಮ,ಸಿದ್ದರ  ಗ್ರಾಮ,ಖಾರ್ಗಾ ಗ್ರಾಮ,ಬೋಳ್ವೆ ಗ್ರಾಮ,ಹಾಗೂ ಮಲ್ಲಾಪುರ ಗ್ರಾಮದ ನೆರೆ ಸಂತ್ರಸ್ತರಿಗೆ ಹೆಚ್ಚಿನದಾಗಿ ಜ್ವರ,ಕೆಮ್ಮು,ನೆಗಡಿ,ಕಾಲು ನೋವು ಸೊಂಟ ನೋವು ಹಾಗೂ ಮುಂದೆ ಬರಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಗೆ ಔಷಧಿ  ಚಿಕಿತ್ಸೆ ಮಾಡಿ ಅಗತ್ಯ ಸಲಹೆ ಸೂಚನೆ ನೀಡಿ ಅವಶ್ಯವಿದ್ದ ಆಯುಷ ಔಷಧಿಗಳನ್ನು ವಿತರಿಸಲಾಯಿತು. ನೆರೆ ಸಂತ್ರಸ್ತರಲ್ಲಿ ಹೆಚ್ಚಾಗಿ ಕಂಡುಬಂದ ಕಾಲಿನ ಫಂಗಸ್‍ಗೆ (ನಂಜಿಗೆ) ಪರಿಣಾಮಕಾರಿಯಾದ ಆಯುಷ ಔಷಧಿಯನ್ನು ವಿತರಿಸಲಾಯಿತು. ಕಾಲಿನ ಫಂಗಸ್‍ಗೆ(ನಂಜಿಗೆ) ಅಗತ್ಯ ಔಷಧಿ ಬಳಸಿದಲ್ಲಿ ನಂಜು ಖಂಡಿತಾ ಕಡಿಮೆಯಾಗುತ್ತದೆ. ಅದಕ್ಕಾಗಿ  ನೆರೆ ಸಂತ್ರಸ್ತರು ಭಯ, ಆತಂಕಗೊಳ್ಳುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾ ಆಯುಷ ಅಧಿಕಾರಿಗಳಾದ  ಡಾ ಲಲಿತಾ ಶೆಟ್ಟಿಯವರು ತಿಳಿಸಿದರು.  

ದಿನಾಂಕ 12-8-2019 ರಂದು ಅಂಕೋಲಾ ತಾಲ್ಲುಕಿನ ಸರಳೆಬೈಲ,ಹೊನ್ನಾಳಿ,ಹೆಬ್ಬುಳ,ಹಿಲ್ಲೂರ ಮತ್ತು ಶಿರೂರ ಗ್ರಾಮದ ನೆರೆಸಂತರಸ್ತರ ಕೆಂದ್ರಗಳಿಗೆ ಭೇಟಿ ನೀಡಿ ಆಯುಷ ಔಷಧಿಗಳನ್ನು ವಿತರಿಸಲಾಯಿತು. ರೇವಿಂಟೋ ಲೈಪ ಸೈಯನ್ಸ ಕಂಪನಿ ಪ್ರೈವೆಟ ಲಿಮಿಟೆಡ ಶಿರವಾಡ ಕಾರವಾರ ಇವರು  ಯಾವುದೇ ಫಲಾಪೇಕ್ಷೆ ಇಲ್ಲದೇ ಕೈಕಾಲಿನ ನಂಜು ನಿವಾರಕ, ಲೋಶನ ಮತ್ತು ತೈಲ ಹಾಗೂ ಸೊಪುಗಳನ್ನು  ನೆರೆ ಸಂತ್ರಸ್ತರಿಗೆ ನೀಡಿ ಚಿಕಿತ್ಸೆ  ನೀಡಲು ಹೆಚ್ಚಿನ ಸಹಕಾರ ಸಹಯೋಗ ನೀಡಿದರು. 

ಅಲ್ಲದೇ  ಡಾ ಜಗದೀಶ ಯಾಜಿ ನೇತೃತ್ವದ ಡಾ ಮಂಜುನಾಥ ಬಟ್ಟ. ಡಾ ಯೋಗೇಶ ಡಾ ರಮೇಶ ಗುಳ್ಳಾಪುರ ಮತ್ತು ಆಸ್ಪತ್ರೆ ಸಿಬ್ಬದಿಗಳು ಯಲ್ಲಾಪುರ ತಾಲ್ಲುಕಿನ ಕಿರವತ್ತಿ ನೆರೆ ಸಂತ್ರಸ್ತರ ಕೇಂದ್ರದಲ್ಲಿ ದಿನಾಂಕ 10-8-2019 ರಂದು ಆಯುಷ ಶಿಬಿರ ನಡೆಸಿ  ಚಾದರ,  ಬೆಡಶೀಟ, ಟೂಥ ಪೆಸ್ಟ, ಸಾಬೂನು, ಸೊಳ್ಳೆ ಬತ್ತಿ ಹಾಗೂ ಅಗತ್ಯ ಆಯುಷ ಔಷಧಿಗಳನ್ನು ವಿತರಿಸಿ ನೆರೆ ಸಂತ್ರಸ್ತರಿಗೆ ಸಹಕಾರ ನೀಡಲಾಯಿತು.ಹಾಗೂ ಯಲ್ಲಾಪುರ ತಾಲ್ಲುಕಿನ ಕಣ್ಣಿಗೇರಿ, ಗುಳ್ಳಾಪುರ ನೆರೆ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಔಷಧಿ ವಿತರಿಸಿದರು. ಡಾ ಸಂಜೀವ ಗಲಗಲಿ ನೇತೃತ್ವದ ವೈದ್ಯರ ತಂಡವು ಸಿಬ್ಬಂದಿಗಳೊಂದಿಗೆ ಮುಂಡಗೋಡ ತಾಲ್ಲುಕಿನ ನೇರೆ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಔಷಧಿ ವಿತರಿಸಿದರು. ಕುಮಟಾ ಆಯುಷ ಆಸ್ಪತ್ರೆಯ ಡಾ ಭಾರತಿ ಪಿ ಭಿ ನೇತೃತ್ವದ ವೈದ್ಯರ ತಂಡವು ಕುಮಟಾ ತಾಲ್ಲುಕಿನ ನೆರೆ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಔಷಧಿ ವಿತರಿಸಿದರು.   

                                                 ಜಿಲ್ಲಾ ಆಯುಷ ಅಧಿಕಾರಿಗಳು
                                                 ಉತ್ತರಕನ್ನಡ ಜಿಲ್ಲೆ ಕಾರವಾರ

 

ಅತಿವೃಷ್ಟಿಯ ಆರೋಗ್ಯ ಸಮಸ್ಯೆಗೆ ಆಯುಷ್ ಪದ್ದತಿಯಲ್ಲಿ ಮುಂಜಾಗೃತೆಯ ಪರಿಹಾರೋಪಾಯಗಳು

   ಅಗಷ್ಟ ಮೊದಲ ವಾರದಲ್ಲಾದ ಅತಿವೃಷ್ಟಿಯ ಪ್ರಕೃತಿಯ ವಿಕೋಪದಿಂದ ಉತ್ತರ ಕರ್ನಾಟಕ ತತ್ತರಿಸಿದಂತೆ ಉತ್ತರಕನ್ನಡ ಜಿಲ್ಲೆಯಲ್ಲೂ ಸಾಕಷ್ಟು ಅನಾಹುತವಾಗಿದ್ದು ಉತ್ತರಕನ್ನಡ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ ಲಲಿತಾ ಯು ಹೆಚ್ ನೆತೃತ್ವದ  ಆಯಷ್ ಇಲಾಖೆ ವೈದ್ಯರುಗಳು ಹಾಗೂ ಸಿಬ್ಬಂದಿಗಳ ತಂಡಗಳು ಕಾರವಾರ, ಅಂಕೋಲ, ಕುಮಟಾ, ಯಲ್ಲಾಪುರ, ಮುಂಡಗೋಡ, ಶಿರಸಿಗಳಲ್ಲಿನ ನೆರೆ ಸಂತ್ರಸ್ತರ  ಕೇಂದ್ರಗಳಲ್ಲಿ ಸಂಚರಿಸಿ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಣೆ ಸಾಂಕೃಮಿಕ ರೋಗ ತಡೆಯಲು ಜಾಗೃತಿ ಮೂಡಿಸುತ್ತಿದೆ. ಶಿಬಿರಕ್ಕೆ ಬೇಟಿನೀಡಿದಾಗ ಕೈ ಕಾಲುಗಳ ಚರ್ಮದ ಕಾಯಿಲೆ, ಕೆಮ್ಮುನೆಗಡಿ, ಮಾನಸಿಕ ಖಿನ್ನತೆ ಮುಂತಾದ ತೊಮದೆಗಳು ಸಾಮಾನ್ಯವಾಗಿ ಕಂಡುಬಂದಿದ್ದು, ಮಳೆಯ ಪ್ರಮಾಣ ತಗ್ಗಿ ನೆರೆ ಇಳಿದಿದ್ದರೂ ಮುಂದಿನ ದಿನಗಳಲ್ಲಿ ಕಂಡುಬರಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಅತ್ಯಗತ್ಯ.
 

ಸಂಭವನೀಯ ಆರೋಗ್ಯ ಸಮಸ್ಯೆಗಳು
ಶ್ವಾಸಕೋಶದ ಸೊಂಕುಗಳು, ಅತಿಸಾರ/ಅಜಿರ್ಣ, ಚರ್ಮದ ಸೊಂಕು, ಸಂಧಿ ನೋವು, ಮಾನಸಿಕ ಖಿನ್ನತೆ.

ಸಂಭವನೀಯ ಆರೋಗ್ಯ ಸಮಸ್ಯೆಗಳ ನಿಯಂತ್ರಣ ಹವಾಮಾನ ವೈಪರಿತ್ಯ, ಮನೆಯಲ್ಲಿ ಸುತ್ತಮುತ್ತ ನೀರು ನಿಂತು ತೇವಾಂಶ ಜಾಸ್ತಿ ಆಗಿರುವುದರಿಂದ, ವೈರಸ್‍ನಿಂದ ಮೂಗು-ಗಂಟಲಿಗೆ ಸೋಂಕು, ನೆಗಡಿ, ಗಂಟಲುನೋವು, ಜ್ವರ ಬರುವ ಸಾಧ್ಯತೆ ಜಾಸ್ತಿ. ಆದ್ದರಿಂದ ಪ್ರತಿಬಂಧಕ ಉಪಾಯ ಅನುಸರಿಸುವುದು ಸೂಕ್ತ. 

1.    ನೆರೆಯಿಂದ ನೀರು, ಮಣ್ಣು ಬಾವಿಗೆ ಸೇರಿ ನೀರು ಕಲುಷಿತವಾಗಿರುವುದರಿಂದ ನೀರನ್ನು ಕುದಿಸಿ, 1/4 ಭಾಗ ಬತ್ತಿಸಿ, ಸೋಸಿ ಕುಡಿಯಬೇಕು. 
2.    ವೈರಸ್ ಸೋಂಕು ಸಾಮಾನ್ಯವಾಗಿ ಮೂಗು ಹಾಗೂ ಗಂಟಲಿನಿಂದ ದೇಹ ಪ್ರವೇಶ ಮಾಡುವುದರಿಂದ ಮೂಗು ಹಾಗೂ ಗಂಟಲಿನ ರಕ್ಷಣೆ ಅಗತ್ಯ.ಕುದಿಸಿ,ಬತ್ತಿಸಿ,ಆರಿಸಿದ ನೀರಿಗೆ ಸ್ವಲ್ಪ ಹರಳುಪ್ಪು ಹಾಕಿ,ದ್ರಾವಣ ಮಾಡಿ ಸೋಸಬೇಕು. ಅದನ್ನು 6-8 ಹನಿ ಮೂಗಿಗೆ ಹಾಕಿ ಪ್ರತಿದಿನ ಮೂಗನ್ನು ಸ್ವಚ್ಛಗೊಳಿಸಬೇಕು. ಗಂಟಲಿನ ಸುರಕ್ಷತೆಗಾಗಿ ಉಗುರು ಬೆಚ್ಚಗಿನ ನೀರಿಗೆ ಅರಿಷಿಣ, ಉಪ್ಪಿನ ಹರಳು ಹಾಕಿ ಗಂಟಲು ಬಾಯಿಯಲ್ಲಿ ಗಳಗುಡಿಸಿ (ಗಾರ್ಗಲಿಂಗ್) ಉಗುಳಬೇಕು. 
3.    ಅರಿಷಿಣ, ಶುಂಠಿ, ಕಾಳು ಮೆಣಸು, ಹಿಪ್ಪಲಿ, ಲಭ್ಯವಿದ್ದರೆ ಅಮೃತಬಳ್ಳಿ ಹಾಗೂ ಜೇಷ್ಠಮಧು ಎಲ್ಲ ಸೇರಿಸಿ 25 ಗ್ರಾಂ ಚೂರ್ಣಕ್ಕೆ ಸುಮಾರು 400 ಮಿಲೀ ನೀರು ಸೇರಿಸಿ 100 ಮಿಲೀಗೆ ಕುದಿಸಿ ಬತ್ತಿಸಿ ಬೆಲ್ಲ ಸೇರಿಸಿ ಮನೆಮಂದಿಯೆಲ್ಲಾ ಎರಡು ಹೊತ್ತು ಕುಡಿಯುವುದು. ಮಕ್ಕಳಿಗೆ 10 ಮಿಲೀ ಎರಡು ಬಾರಿ; ದೊಡ್ಡವರಿಗೆ 20 ಮಿಲೀ ಎರಡು ಬಾರಿ.
4.    5-6 ಚಮಚ ನೀರುಳ್ಳಿ ರಸಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತಜ್ವರ, ನೆಗಡಿ ಪರಿಹಾರವಾಗುತ್ತದೆ.
5.    ಮುಂದಿನ ದಿನಗಳಲ್ಲಿ ಸೊಳ್ಳೆಯ ನಿಯಂತ್ರಣವು ಅತಿ ಮುಖ್ಯ. ಧೂಪ, ಬೆಳ್ಳುಳ್ಳಿ ಸಿಪ್ಪೆ, ಲಕ್ಕಿ ಸೊಪ್ಪು, ಸಾಸಿವೆ ಕಾಳು ಇವುಗಳನ್ನು ತೆಂಗಿನ ಸಿಪ್ಪೆಯ ಜೊತೆಗೆ ನೀಲಗಿರಿ ಎಣ್ಣೆಯ ,ಕರ್ಪೂರ ಸೇರಿಸಿ ಸಂಜೆಯ ಹೊತ್ತಿಗೆ ಮನೆಯೊಳಗೆ, ಸುತ್ತಮುತ್ತ, ದನದ ಕೊಟ್ಟಿಗೆಯಲ್ಲಿ ಧೂಪ ಹಾಕಬೇಕು. ತೋಟದಲ್ಲಿ ಕೆಲಸ ಮಾಡುವವರು ಬೇವಿನೆಣ್ಣೆ ಅಥವಾ ತೆಂಗಿನೆಣ್ಣೆ ಜೊತೆ ಅರಿಶಿನ ಕಲಸಿ ಹಚ್ಚಿಕೊಂಡು ಕೆಲಸ ಮಾಡುವುದು ಸೂಕ್ತ. 
6.    ಬಾವಿಯ ನೀರು ಕಲುಷಿತವಾಗಿರುವುದರಿಂದ ಅತಿಸಾರ, ಕಾಮಾಲೆ, ಅಗ್ನಿಮಾಂದ್ಯ, ಅಜೀರ್ಣ ರೋಗಗಳ ಸಾಧ್ಯತೆ ಹೆಚ್ಚು. ಅದಕ್ಕಾಗಿ ಕಾಯಿಸಿ ಆರಿಸಿದ ನೀರಿನ್ನು ಬಳಸಿ ಮಜ್ಜಿಗೆ ಮಾಡಿಕೊಂಡು ಅದಕ್ಕೆ ಕರಿಬೇವಿನ ಸೊಪ್ಪು, ಹಿಂಗು, ಓಮಕಾಳು, ಬೆಳ್ಳುಳ್ಳಿ ಇತ್ಯಾದಿ ಜೀರ್ಣಕಾರಕ ಪದಾರ್ಥಗಳನ್ನು ಬಳಸಿ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಬೂರಸಲು (ಫಂಗಸ್) ಬಂದ ಧವಸ ಧಾನ್ಯಗಳನ್ನು ಬಳಸಬಾರದು.
7.    ಚರ್ಮದ ಸೋಂಕಿಗೆ ತೇವಾಂಶ ಇರುವ ಒಳಉಡುಪು ಕಾರಣ. ಆದ್ಧರಿಂದ ತೇವಾಂಶ ಇರುವ ಬಟ್ಟೆಗಳನ್ನು ಧರಿಸಬಾರದು. ಚರ್ಮಕ್ಕೆ ಸಂಬಂಧಿಸಿದಂತೆ ಕಾಲು ಬೆರಳಿನ ನಂಜು ಎಲ್ಲಾ ಕಾಳಜಿ ಕೇಂದ್ರಗಳ ಭೇಟಿಯ ಸಮಯದಲ್ಲಿ ಗಮನಕ್ಕೆ ಬಂದಿದೆ. ಸ್ವಲ್ಪ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೇನುಮೇಣ ಕರಗಿಸಿ ಸೇರಿಸಿ ಅರಿಷಿಣ ಹಾಕಿದರೆ ಮುಲಾಮು ಸಿದ್ಧವಾಗುತ್ತದೆ. ಜಾಜಿ ಮಲ್ಲಿಗೆ ಹೂವಿನ ಗಿಡವಿದ್ದಲ್ಲಿ ಅದರ ಎಲೆಯ ಸ್ವರಸ ಸಹ ಸೇರಿಸಿದರೆ ಉತ್ತಮ. ರಾತ್ರಿ ಕಾಲನ್ನು ಬಿಸಿನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ ಮೇಲೆ ಹೇಳಿದ ಮುಲಾಮು ಹಚ್ಚುವುದು.
8.    ಸಂಧಿನೋವಿಗೆ ಕೊಬ್ಬರಿ ಎಣ್ಣೆಗೆ ನಾಲ್ಕು ಕಾಳು ಮೆಣಸು, ಬೆಳ್ಳುಳ್ಳಿ ಕುಟ್ಟಿ ಹಾಕಿ ಬಿಸಿ ಮಾಡಿ ಹಚ್ಚಿ ಬಿಸಿನೀರಿನ ಸ್ನಾನ ಮಾಡಬೇಕು. ಮಕ್ಕಳು ಹಾಗೂ ವಯಸ್ಸಾದವರು ಮೈತುಂಬ ದಪ್ಪ ಬಟ್ಟೆ ಹಾಕಿಕೊಂಡು ಶೀತದಿಂದ ರಕ್ಷಿಸಿಕೊಳ್ಳಬೇಕು. 
9.    ಸಂಧಿನೋವಿಗೆ ಕಷಾಯ : 100 ಗ್ರಾಂ ಮೆಂತೆ, 25 ಗ್ರಾಂ ಕೊತ್ತಂಬರಿ, 8 ರಿಂದ 10 ಕಾಳುಮೆಣಸು ಸೇರಿಸಿ ಸ್ವಲ್ಪ ಹುರಿದು ಪುಡಿ ಮಾಡಿಟ್ಟುಕೊಂಡು ಬಿಸಿಹಾಲಿಗೆ 1 ಚಮಚ ಸೇರಿಸಿ ಕುಡಿಯುವುದು. ಅಮೃತಬಳ್ಳಿ ಹಾಗೂ ಕಳ್ಳಂಗಡಲೆ ಬೇರು (ಬಲಮೂಲ) ಲಭ್ಯವಿದ್ದರೆ ಸೇರಿಸಿ ಕಷಾಯ ಮಾಡಬಹುದು.
10.    ಮಾನಸಿಕ ಖಿನ್ನತೆ : ಮನೆ, ಸಾಮಾನು, ಕೃಷಿ, ದನಕರುಗಳು ಇತ್ಯಾದಿ ಕಳೆದುಕೋಡಮ ಮನೆಯ ಹಿರಿಯರಿಗೆ ಮಾನಸಿಕವಾದ ಆತಂಕ, ಖಿನ್ನತೆ ಸಹಜ. ಇವರುಗಳಿಗೆ ಧ್ಯಾನ, ಯೋಗ, ಪ್ರಾಣಾಯಾಮ, ಮುದ್ರೆ ಹಾಗೂ ಆಪ್ತರಾದವರ ಹಿತನುಡಿ ಅತ್ಯಗತ್ಯ.

ಜಿಲ್ಲಾ ಆಯುಷ್ ಅಧಿಕಾರಿಗಳು
ಕಾರವಾರ, ಉತ್ತರ ಕನ್ನಡ ಜಿಲ್ಲೆ
  ಸಹಯೋಗ ಡಾ ಜಗದೀಶ ಯಾಜಿ
  ವೈದ್ಯಾಧಿಕಾರಿ, ಸ ಆ ಆ ಶಿರಸಿ.

Read These Next

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.