ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೆಯ ನಿಶ್ಚಿತ ಪಿಂಚಣಿ  ನೀಡುವಂತೆ ಆಗ್ರಹ

Source: SOnews | By Staff Correspondent | Published on 6th July 2024, 7:57 PM | Coastal News |

ಭಟ್ಕಳ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಭಟ್ಕಳ ತಾಲೂಕು ಘಟಕದ ಪದಾಧಿಕಾರಿಗಳು  ಹಳೆಯ ಓಪಿಎಸ್ (ನಿಶ್ವಿತ ಪಿಂಚಣಿ) ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರವು ಈಗಾಗಲೆ, ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ  ಓಪಿಎಸ್ ಜಾರಿಗೊಳಿಸುವ ಭರವಸೆಯನ್ನು ನೀಡಿದ್ದು ಅದರಂತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಓಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್ಪಿಎಸ್ ನ್ನು ಯಥಾವತ್ತಾಗಿ ಜಾರಿ ಮಾಡಬೇಕು, ನೇಮಕಾರಿ, ಪ್ರಾಧಿಕಾರದ ವಂತಿಗೆಯನ್ನು ಆಡಳಿ ಮಂಡಳಿಗಳ ಬದಲಾಗಿ ಸರ್ಕಾರವೇ ಭರಿಸಲು ಕ್ರಮ ವಹಿಸಬೇಕು, ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂಧಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕ 2014 ಕ್ಕೆ ತಿದ್ದುಪಡಸಿ ತಂದು ಅಥವಾ ಅದನ್ನು ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಉದಯ ನಾಯ್ಕ, ಅಧ್ಯಕ್ಷ ಕೆ.ಪಿ ಮಡಿವಾಳ, ಉಪಾಧ್ಯಕ್ಷ ಕಾಂತ ಭಟ್, ಕಾರ್ಯದರ್ಶಿ ಅರುಣ, ಖಜಾಂಚಿ ವಿನಾಯಕ ಭಟ್, ಸಹಕಾರ್ಯದರ್ಶಿ ಪ್ರಹ್ಲಾದ್ ನಾಯಕ, ಸಂಘಟನಾ ಕಾರ್ಯದರ್ಶಿ ರಾಜಾಸಾಬ್, ಲೀಲಾವತಿ ಮೊಗೇರ್, ಇಮ್ರಾನ್ ಮುಲ್ಲಾ, ಶಾಂತಲಾ ನಾಯ್ಕ, ಗಣಪತಿ ನಾಯ್ಕ ಮತ್ತಿತರರು ಹಾಜರಿದ್ದರು.

Read These Next

ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರ್ಸಿ ತಾಲೂಕಿನ ಮಾರಿಕಾಂಬಾ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ...

ರಾಷ್ಟ್ರ ಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಬೆಳಕೆ ನಾಗೇಂದ್ರ ನಾಯ್ಕ ತೃತೀಯ ಸ್ಥಾನ

೪ನೇ ಭಾರತೀಯ ಓಪನ್ ಯು-೨೩ ಅಥ್ಲೆಟಿಕ್ಸ್ ಸ್ಪರ್ಧೆ ೨೦೨೪ರ ಜೂನಿಯರ್ ಮತ್ತು ಅಂಡರ್ -೨೩ ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ...