ಸೆ. 19ರಿಂದ 24ರ ವರೆಗೆ ಉತ್ತರ ಕನ್ನಡದಲ್ಲಿ ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಕ್ರೀಡಾಪಟುಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳು

Source: S O News | By I.G. Bhatkali | Published on 17th September 2024, 9:45 PM | Coastal News |

ಕಾರವಾರ: ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದ್ದು, ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವನ್ನು ಮೈಸೂರಿನಲ್ಲಿ ನಡೆಯಲಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಆಯ್ಕೆ ಮಾಡಬೇಕಾಗಿರುವ ಪ್ರಯುಕ್ತ ಸಪ್ಟೆಂಬರ್ 19 ರಿಂದ 24 ನೇ ತಾರೀಖಿನವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದ್ದು, ಆಸಕ್ತ ಕ್ರೀಡಾಪಟುಗಳು ಆಯಾ ತಾಲೂಕಿನ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು/ತರಬೇತುದಾರರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ  ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆ, ಹರಿದೇವ ನಗರ ಹಬ್ಬುವಾಡ, ಕಾರವಾರ, ದೂರವಾಣಿ ಸಂಖ್ಯೆ : 08382-201824 / 9480886551 ಇವರಿಗೆ ದೂರವಾಣಿ ಮೂಲಕ ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.

ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳ ವಿವರ ಈ ಕೆಳಕಂಡAತೆ ಇದೆ

ಅಥ್ಲೆಟಿಕ್ ಸ್ಪರ್ಧೆಗಳು (ಪುರುಷರಿಗೆ)- 100ಮೀ, 200 ಮೀ, 400 ಮೀ, 800ಮೀ, 1500ಮೀ, 5000ಮೀ ಓಟ, 10000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 110 ಮೀ ಹರ್ಡಲ್ಸ್, 4*100ಮೀ ರೀಲೆ, 4*400 ರೀಲೆ.

ಅಥ್ಲೆಟಿಕ್ ಸ್ಪರ್ಧೆಗಳು (ಮಹಿಳೆಯರಿಗೆ)- 100ಮೀ, 200 ಮೀ, 400ಮೀ, 800 ಮೀ, 1500ಮೀ, 3000ಮೀ, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ ಹರ್ಡಲ್ಸ್, 4*100ಮೀ ರೀಲೆ, 4*400 ರೀಲೆ.

ಸಾಂಪ್ರದಾಯಿಕ ಯೋಗಾಸನ ತಾಲೂಕು ಮಟ್ಟ-1. ವಿರಭದ್ರಾಸನ 2. ಜಾನು ಶಿರಶಾಸನ 3. ಹಲಾಸನ 4. ಧನುರಾಸನ

ಕಾರವಾರದಲ್ಲಿ ನಡೆಯುವ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಶಾನೂರಲಿ (9590318322), ಅಂಕೋಲದಲ್ಲಿ ವೆಂಕಟೇಶ ನಾರಾಯಣ ನಾಯಕ (9449397734), ಕುಮಟಾದಲ್ಲಿ ರಾಘವೇಂದ್ರ ಗಾಂವ್ಕರ (9482496342, 9380107509), ಹೊನ್ನಾವರದಲ್ಲಿ ಸುಧೀಶ ನಾಯ್ಕ (9448530726), ಭಟ್ಕಳದಲ್ಲಿ ನಾಗರಾಜ ಪಟಗಾರ (9448995841), ಶಿರಸಿಯಲ್ಲಿ ಕಿರಣ ನಾಯ್ಕ (9449801404), ಸಿದ್ದಾಪುರದಲ್ಲಿ ಮಾಧವ ನಾಯ್ಕ (9449360803), ಯಲ್ಲಾಪುರದಲ್ಲಿ ನಾರಾಯಣ ನಾಯಕ (9986221280), ಮುಂಡಗೋಡದಲ್ಲಿ ಹನುಮಂತ ವಡ್ಡರ (8105464657), ಹಳಿಯಾಳದಲ್ಲಿ ತುಕಾರಾಮ ಗೌಡ  (9945489193), ಜೋಯಿಡಾ ದಲ್ಲಿ ಶಿವಾನಂದ ಆರ್. (7019565606), ದಾಂಡೇಲಿ ಯಲ್ಲಿ ಮಮತಾ ಕೇಳೋಜಿ (8971873968) ರವರನ್ನು ಸಂಪರ್ಕಿಸಬಹುದಾಗಿದೆ.

ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಜಾಲಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ: ಅಂಜುಮನ್ ಬಿಎಡ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಕಾಲೇಜ್ ಆಫ್ ಎಜುಕೇಶನ್ (ಬಿಎಡ್) ವಿದ್ಯಾರ್ಥಿಗಳು ಜಾಲಿ ಬೀಚ್‌ನಲ್ಲಿ ಗುರುವಾರ ಬೀಚ್ ಸ್ವಚ್ಛತಾ ಅಭಿಯಾನವನ್ನು ...

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...