ಜಿದ್ದಾದಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ಮೊದಲ 3 ಸ್ಥಾನಗಳನ್ನು ಗೆದ್ದುಕೊಂಡ ಭಟ್ಕಳದ ಮಹಿಳೆಯರು
ಭಟ್ಕಳ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದ ಸವಿ ನೆನಪಿಗಾಗಿ ಅರಬ್ ರಾಷ್ಟ್ರ ಸೌದಿ ಅರೇಬಿಯಾ ಜಿದ್ದಾದಲ್ಲಿ ನಡೆದ ಭಾರತೀಯ ಮಹಿಳೆಯರು ಅಡುಗೆ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕಿನ ಮೂವರು ಮಹಿಳೆಯರ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ.
ತಾಲೂಕಿನ ಬಾಸಿಮಾ ಮೋತಿಶಮ್ ಅಬ್ದುಲ್ ಮಲ್ಲೀಕ್ ಇವರು ಶಾವಿಗೆ ಹಾಗೂ ಹಾಲಿನ ಕೆನೆಯಿಂದ ತಯಾರಿಸಿದ ಅಂಗೂರ್ ರಸ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ಇಲ್ಲಿನ ಅನ್‌ಆಮ್ ತಂದೆ ರೆಹಾನ್ ಕೊಬಟ್ಟೆ ಇವರು ಕ್ಯಾರೆಟ್ ಮತ್ತು ಬಾದಾಮ ಹಾಲಿನಿಂದ ತಯಾರಿಸಿದ ವೈಟ್ ಚಾಕಲೇಟ್ ಪಾನಿಪುರಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಮುಂತಝಾ ಉಬೈದುಲ್ಲಾ ಆಸ್ಕಿರಿ ಇವರು ಸಿಂಯಾಳ ಮತ್ತು ಸೀತಾಫಲ ಹಣ್ಣನ್ನು ಬಳಸಿಕೊಂಡು ಟೆಂಡರ್ ಕೊಕೋನಟ್ ಎಂಡ್ ಸೀತಾಫಲ್ ಮೆಥೇ ತಯಾರಿಸಿ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಜಿದ್ದಾದ ಭಾರತೀಯ ರಾಯಭಾರ ಕಚೇರಿ ಆವರಣದಲ್ಲಿ ಇಂಡಿಯನ್ ಫ್ರಟೆರ್ನಿಟಿ ಫೋರಮ್ ವತಿಯಿಂದ ಫೂಡ್ ಎಕ್ಸಿಬಿಶನ್ ಎಂಡ್ ಡೆಸರ್ಟ ಕಾಂಟೆಸ್ಟ್' ಹೆಸರಿನಲ್ಲಿ ಯೋಜಿಸಲಾದ ಈ ಸ್ಪರ್ಧೆಯಲ್ಲಿ ಭಟ್ಕಳದ 8 ಮಹಿಳೆಯರು ಸೇರಿದಂತೆ ದೇಶದ ವಿವಿಧೆಡೆಯ 40 ಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಟ್ಕಳ ಮಹಿಳೆಯರ ಈ ಸಾಧನೆಗೆ ಇಲ್ಲಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ.