ಭಟ್ಕಳದಲ್ಲಿ ಮುಂದುವರೆದ ಮಳೆ; ದೇವಸ್ಥಾನದ ಗೋಡೆ ಹಾಗೂ ಮನೆ ಕುಸಿತ

Source: SOnews | By Staff Correspondent | Published on 6th July 2024, 8:16 PM | Coastal News |

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು ಶುಕ್ರವಾರ ಬಿದ್ದ ಭಾರೀ ಮಳೆಗೆ ಭಟ್ಕಳದ ಖಲೀಫ ಬೀದಿಯಲ್ಲಿರುವ ಮನೆ ಸಂಪೂರ್ಣ ಕುಸಿದಿದ್ದು, ಪಕ್ಕದ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ. ಅಲ್ಲದೆ ಕೊರಗರಕೇರಿ ಕೋಟ ಜಟಗೇಶ್ವರ ದೇವಸ್ಥಾನದ ಗೋಡೆ ಕುಸಿದು ಬಿದ್ದಿದ್ದು ಪಕ್ಕದಲ್ಲಿ ಸರ್ಕರಿ ಪ್ರಾಥಮಿಕ ಶಾಲೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ.

ಖಲೀಫಾ ಸ್ಟ್ರೀಟ್ ಅಲ್ತಾಫ್ ಎಂಬುವವರಿಗೆ ಸೇರಿದ ಹಳೆ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ ಅಪಾರ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ.  

ರಾ.ಹೆ.66 ರ ಅಗಲೀಕರಣದಲ್ಲಿ ಕೋಟ ಜಟಗೇಶ್ವರ ದೇವಸ್ಥಾನ ತೆರವುಗೊಳಿಸಿ ಸಣ್ಣ ಕಟ್ಟಡದಲ್ಲಿ ದೇವರ ಮೂರ್ತಿಗಳನ್ನು ತಾತ್ಕಾಲಿಕವಾಗಿ ಪ್ರತಿಸ್ಠಾಪಿಸಲಾಗಿತ್ತು. ಆದರೆ ಶುಕ್ರವಾರ ರಾತ್ರಿ ಬಿದ್ದ ಮಳೆಯಿಂದಾಗಿ ದೇವರನ್ನು ಇಟ್ಟಿರುವ ಕೋಣೆಯು ಕುಸಿದು ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಅಲ್ಲಿರುವ ಶಾಲೆ ಹಾಗೂ ಕೆಲ ಮನೆಗಳು ಕುಸಿಯುವ ಹಂತದಲ್ಲಿವೆ ಎಂದು ವರದಿಯಾಗಿದೆ.

 

Read These Next

ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರ್ಸಿ ತಾಲೂಕಿನ ಮಾರಿಕಾಂಬಾ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ...

ರಾಷ್ಟ್ರ ಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಬೆಳಕೆ ನಾಗೇಂದ್ರ ನಾಯ್ಕ ತೃತೀಯ ಸ್ಥಾನ

೪ನೇ ಭಾರತೀಯ ಓಪನ್ ಯು-೨೩ ಅಥ್ಲೆಟಿಕ್ಸ್ ಸ್ಪರ್ಧೆ ೨೦೨೪ರ ಜೂನಿಯರ್ ಮತ್ತು ಅಂಡರ್ -೨೩ ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ...