ಲೋಕಸಭೆಯಲ್ಲಿ ಸಂಸದೆಯರ ಪ್ರಮಾಣ 33 ಶೇ. ಹೆಚ್ಚಳ ಸಾಧ್ಯತೆ

Source: Vb | By I.G. Bhatkali | Published on 20th September 2023, 7:30 AM | National News |

ಲೋಕಸಭೆಯಲ್ಲಿ ಈಗ ಒಟ್ಟು 543 ಸಂಸತ್ ಸದಸ್ಯರ ಪೈಕಿ 78 ಮಹಿಳೆಯರು, ಅಂದರೆ ಸುಮಾರು 15 ಶೇ.. ರಾಜ್ಯಸಭೆಯ 245 ಸದಸ್ಯರ ಪೈಕಿ ಮಹಿಳೆಯರ ಸಂಖ್ಯೆ 24, ಅಂದರೆ ಸುಮಾರು 14 ಶೇ.

ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅರುಣಾಚಲ ಪ್ರದೇಶ, ಅಸ್ಸಾಮ್, ಒಡಿಶಾ ಮತ್ತು ಗುಜರಾತ್ ಸೇರಿದಂತೆ ಹೆಚ್ಚಿನ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿ ನಿಧ್ಯ 10 ಶೇಕ್ಕಿಂತಲೂ ಕಡಿಮೆಯಿದೆ ಎನ್ನುವುದನ್ನು ಅಂಕಿಅಂಶಗಳು ತೋರಿ ಸುತ್ತವೆ.

ಬಿಹಾರ, ಉತ್ತರಪ್ರದೇಶ, ದಿಲ್ಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರಾಖಂಡ ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಸದಸ್ಯರ ಪ್ರಮಾಣ 10-12 ಶೇ.ದಷ್ಟಿದೆ. ಗರಿಷ್ಠ ಮಹಿಳಾ ಪ್ರಾತಿನಿಧ್ಯ ಇರುವುದು ಛತ್ತೀಸ್‌ಗಡದಲ್ಲಿ. ಅಲ್ಲಿ ಶಾಸಕಿಯರ ಪ್ರಮಾಣ 14.44 ಶೇ.

ನೂತನ ವಿಧೇಯಕ ಕಾಯ್ದೆಯಾಗಿ ಜಾರಿಗೊಂಡಲ್ಲಿ ಸಂಸತ್‌ನಲ್ಲಿ ಮಹಿಳಾ ಸದಸ್ಯರ ಬಲ 181ಕ್ಕೇರಲಿದೆ. ಪ್ರಸಕ್ತ ಸದನದಲ್ಲಿ 82 ಮಹಿಳಾ ಸಂಸದರಿದ್ದಾರೆ.

ಕರಡು ಮಸೂದೆಯ ಪ್ರಕಾರ ಸಂಸತ್‌ನಲ್ಲಿ ಹಾಗೂ ರಾಜಧಾನಿ ದಿಲ್ಲಿ ಸೇರಿದಂತೆ ಎಲ್ಲಾ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಈ 33 ಶೇ.

ಮೀಸಲಾತಿಯೊಳಗೆ ಎಸ್ಸಿ-ಎಸ್‌ಟಿ ಮಹಿಳಾ ಮೀಸಲಾತಿಯನ್ನು ಕೂಡಾ ಕಲ್ಪಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್‌ ತಿಳಿಸಿದರು.

ಕ್ಷೇತ್ರಗಳ ಮರುವಿಂಗಡಣೆ ನಂತರವೇ ನೂತನ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಮಸೂದೆ ಅಂಗೀಕಾರಗೊಂಡ ಬಳಿಕ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆ ನಡೆಯಲಿದೆ.

Read These Next

ಬಹ್ರೈಚ್ ಹಿಂಸಾಚಾರ: ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಕ್ಷಮೆಯಾಚನೆ

ಹೊಸದಿಲ್ಲಿ: ಬಹ್ರೈಚ್ ಹಿಂಸಾಚಾರದಲ್ಲಿ ಮೃತ ರಾಮ್ ಗೋಪಾಲ್ ಮಿಶ್ರಾ ಸಾವಿಗೆ ಸಂಬಂಧಿಸಿ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ...

ಬುಲ್ಡೋಜರ್ ನ್ಯಾಯ; ಮಧ್ಯಸ್ಥಿಕೆಗಾಗಿ ಸುಪ್ರೀಂ ಕೋರ್ಟ್‌ನ್ನು ಕೋರಿದ ವಿಶ್ವಸಂಸ್ಥೆಯ ತಜ್ಞ

ವಸತಿ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಪ್ರೊ. ಬಾಲಕೃಷ್ಣನ್ ರಾಜಗೋಪಾಲ್ ಅವರು ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ...