ಭಟ್ಕಳ, ಜೂನ್ ೨೨:ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸೈಕಲ್ ಮೂಲಕ ಜನರಲ್ಲಿ “ಬೇಟಿ ಬಚಾವೋ- ಬೇಟಿ ಪಡಾವೋ” ಎಂಬ ಆಂದೋಲನವನ್ನು ಡೆಲ್ಲಿ ಮೂಲಕ ಯುವಕರಿಬ್ಬರು ಮಾಡುತ್ತಿದ್ದಾರೆ. ಇವರ ಈ ಸೈಕಲ್ ಮೂಖೇನ ನಡೆಯುತ್ತಿರುವ ಆಂದೋಲನವು ಬುಧವಾರದಂದು ಭಟ್ಕಳಕ್ಕೆ ಬಂದು ತಲುಪಿದ್ದಾರೆ. ಡೆಲ್ಲಿ ಮೂಲದ ಇಬ್ಬರು ಯುವಕರಾದ ಆಕಾಶ್ ಒಸ್ಮಾನ್ ಹಾಗು ನವೀನ್ ಗೌತಮ್ ಇವರು ಮೇ 16 ರಂದು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಸೈಕಲ್ ಮೂಲಕ “ಬೇಟಿ ಬಚಾವೋ- ಬೇಟಿ ಪಡಾವೋ” ಎಂದ ಸಂದೇಶದ ಜಾಥಾವನ್ನು ಪ್ರಾರಂಭಿಸಿದ್ದಾರೆ. ಇವರ ಈ ಸಂದೇಶದ ಜಾಥಾವು ಸಮಾಜದಲ್ಲಿ ಬಹುಮುಖಿಯಾಗಿರುವ ಒಂದು ಹೆಣ್ಣಿನ ಬಗ್ಗೆ ಗೌರವವನ್ನು ಎತ್ತಿತೋರಿಸುವಂತಿದೆ. ಕಾಶ್ಮೀರದಿಂದ ಸಾಗಿದ ಇವರು ಸೈಕಲ್ ಜಾಥಾ ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ. ಗುಜರಾತ್‍ನಿಂದ ಕರ್ನಾಟಕದತ್ತ ಪ್ರಯಾಣ ಸಾಗಿದೆ. ಬುಧವಾರದಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಬಂದು ತಲುಪಿದ್ದು, ತಾಲೂಕಿನಲ್ಲಿ ಕೆಲ ಸಮಯ ಕಳೆದು ಸಾರ್ವಜನಿಕರಿಗೆ ಹೆಣ್ಣು ಮಕ್ಕಳನ್ನು ಸಾಯಿಸಬೇಡಿ, ಅವರನ್ನು ಬೆಳೆಸೆ ಅವರಿಗೆ ಶಿಕ್ಷಣವನ್ನು ನೀಡಿ ಆಗ ಸಮಾಜ ಹೇಗೆ ಬೆಳೆಯುತ್ತದೆಂಬ ಸಂದೇಶದ ಮಾಹಿತಿಯನ್ನು ನೀಡಿದರು. ಈ ಯುವಕರ ಸೈಕಲ್ ಜಾಥಾವು 40 ದಿನಗಳಲ್ಲಿ 4000 ಕಿ.ಮೀ ನಷ್ಟು ಅಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ನಡೆಯಲಿದೆ. ಸೈಕಲ್ ಜಾಥಾ ಜೊತೆಗೆ ಸದ್ಯ ದೇಶಾದ್ಯಂತ ಅತೀವೇಗದಲ್ಲಿರುವ ಸಾಮಾಜಿಕ ಜಾಲತಾಣವಾದ ಫೇಸ್ಬುಕ್‍ನಲ್ಲಿಯು ಸಹ ಕಾರ್ಯನಿರತರಾಗಿದ್ದಾರೆ. ಈ ಸಂಧರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ನವೀನ್ ಗೌತಮ್ “ ಈಗಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ದೌಜನ್ಯಗಳು ನಡೆಯುತ್ತಿದ್ದು, ಹೆಣ್ಣಿಗೆ ಸಮಾಜದಲ್ಲಿ ಯಾವುದೇ ರೀತಿಯಲ್ಲೂ ರಕ್ಷಣೆ ಇಲ್ಲದಂತಾಗಿದೆ. ಅದೇ ರೀತಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕೊನೆಯೆ ಇಲ್ಲದಂತಾಗಿದೆ. ಅದೇ ರೀತಿ ಭ್ರೂಣ ಹತ್ಯೆ, ಹೆಣ್ಣು ಮಗುವಿಗೆ ಶಿಕ್ಷಣ ದೊರಕಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸೈಕಲ್ ಜಾಥಾವನ್ನು ಪ್ರಾರಂಭಿಸಿದ್ದೇವೆ.” ಎಂಬ ಸಂದೇಶವನ್ನು ನೀಡಿದರು.
ಈ ಯುವಕರು ಸೈಕಲ್ ಜಾಥಾ ಜೊತೆಗೆ ಸೈಕಲ್‍ಗೆ ಒಂದು ಕಾಲ್ಗೆಜ್ಜೆಯನ್ನು ಕಟ್ಟಿಕೊಂಡು ಬಂದಿದ್ದು, ಈ ಬಗ್ಗೆ ಕೇಳಿದಾಗ ಒಂದು ಕಾಲ್ಗೆಜ್ಜೆಯ ನಾದ ಹೇಗೆ ಶಬ್ಧತರಂಗವಾಗಿ ಹೊರಡಿಸುತ್ತದೆಯೋ ಅದೇ ರೀತಿ ಸಮಾಜದಲ್ಲಿ ಒಂದು ಹೆಣ್ಣು ಸಹ ಸಮಾಜದಲ್ಲಿ ತಲೆಎತ್ತಿ, ಅವಳಿಗೆ ಸಿಗಬೇಕಾದ ರಕ್ಷಣೆ ಜೊತೆಗೆ ಮುಖ್ಯವಾಹಿನಿಗೆ ಬಂದು ಅವಳು ಸಹ ಪುರುಷರ ತರ ಸಹಬಾಳ್ವೆ ನಡೆಸಬೇಕೆಂಬ ಸಂದೇಶ ಸಾರುತ್ತದೆ. ಜೊತೆಗೆ ಇಬ್ಬರು ಯುವಕರ ಪೈಕಿ ಒಬ್ಬಾತ ಕೊಳಲು ವಾದಕನಾಗಿದ್ದು, “ಬೇಟಿ ಬಚಾವೋ- ಬೇಟಿ ಪಡಾವೋ” ಎಂಬ ಸಂದೇಶವನ್ನು ತನ್ನ ವಿಶಿಷ್ಟ ಕಲೆಯ ಜೊತೆಗೆ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದೇ ಒಂದು ವಿಶೇಷ. ಮಾರ್ಗ ಮಧ್ಯೆ ಸಿಗುವ ಶಾಲಾ-ಕಾಲೇಜುಗಳಿಗೆ ಭೇಟಿ “ಬೇಟಿ ಬಚಾವೋ- ಬೇಟಿ ಪಡಾವೋ” ಬಗ್ಗೆ ಅರಿವಿನ ಕರ ಪತ್ರ ನೀಡುತ್ತಾ ಸಾಗುತ್ತಾರೆ.