ಭಟ್ಕಳದ ಪ್ರತಿಷ್ಟಿತ ರಾಬಿತಾ ಎಕ್ಸಲೆನ್ಸ್ ಅವಾರ್ಡ್ ನ್ಯೂ ಶಮ್ಸ್ ಸ್ಕೂಲ್ ಮಡಿಲಿಗೆ

Source: S O news | By Staff Correspondent | Published on 17th July 2024, 8:35 PM | Coastal News | Don't Miss |

ಭಟ್ಕಳ: ಇಲ್ಲಿನ ಅನಿವಾಸಿ ಭಾರತಿಯರ ಸಂಘಟನೆ ರಾಬಿತಾ ಸೂಸೈಟಿ ವತಿಯಿಂದ ಪ್ರತಿ ವರ್ಷ ನೀಡಲ್ಪಡುವ ರಾಬಿತಾ ಬೆಸ್ಟ್ ಸ್ಕೂಲ್ ಅವಾರ್ಡ್ ಪುರಸ್ಕಾರವನ್ನು ನಗರದ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್  ಸೈಟಿಯ   ಶಮ್ಸ್ ಸ್ಕೂಲ್ ಪಡೆದುಕೊಂಡಿದೆ. ಅಲಿ ಪಬ್ಲಿಕ್ ಸ್ಕೂಲ್ ನ ವಿಜ್ಞಾನ ಶಿಕ್ಷಕಿ ರಿಫತ್ ಕೋಬಟ್ಟೆಗೆ ರಾಬಿತಾ ಬೆಸ್ಟ್  ಚರ್ ಅವಾಡ್ ಲಭಿಸಿ ಬುಧವಾರ ಸಂಜೆ ಅಂಜುಮನಾಬದ್ ಮೈದಾನದಲ್ಲಿ ನಡೆದ ರಾಬಿತಾ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಸಮಾರೋಪ ಸಮಾರಂಭದಲ್ಲಿ ಅಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಮಾಜಿ ವಕ್ತಾರ ಖ್ಯಾತ ವಿದ್ವಾಂಸ ಮೌಲಾನ ಖಲಿಲರ‍್ರಹ್ಮಾನ್ ಸಜ್ಜಾದ್ ನೋಮಾನಿ ಪ್ರಶಸ್ತಿಗಳನ್ನು ಪ್ರದಾನಿಸಿದರು. 

ನಂತರ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಪಡೆದವರು ಹೆಚ್ಚಾದಂತೆ ನಮ್ಮ ಸಮಾಜ ಹಾಳಾಗುತ್ತಿದೆ ಎಂದರೆ ಇದರ ಕುರಿತು, ಶಿಕ್ಷಣ ಸಂಸ್ಥೆಯ ಮುಖಂಡರು, ಶಿಕ್ಷಕರು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯ ಹೊಣೆಗಾರರು ಕೇವಲ ಶಾಲಾ ಕಟ್ಟಡ ಮತ್ತು ಸಂಪನ್ಮೂಲವನ್ನು ಕ್ರೂಢಿಕರಿಸುವುದರಲ್ಲೇ ತಮ್ಮ ಗಮನ ಕೇಂದ್ರಿಕರಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದರ ಕಡೆಗೂ ಗಮನ ಹರಿಸಬೇಕಾಗಿದೆ ಎಂದರು. 

ರಾಬಿತಾ ಸಂಸ್ಥೆಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಅತಿಕರ‍್ರಹ್ಮಾನ್ ಮುನೀರಿ ಪ್ರಸ್ತಾವಿಕವಾಗಿ ಮಾತನಾಡಿ ರಾಬಿತಾ ಸಂಸ್ಥೆಯ ಚಟುವಟಿಕೆಗಳನ್ನು ಪರಿಚಯಿಸಿದರು. 

ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೂನೂಸ್ ಕಾಜಿಯಾ, ಜಮಾಅತುಲ್ ಮುಸ್ಲಿಮ್ ಪ್ರಧಾನ ಕಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಮರ್ಕಝೀ ಜಮಾಅತ್ ನ ಪ್ರಧಾನ ಕಾರ್ಯದರ್ಶಿ ಮೌಲಾನ ಕ್ವಾಜಾ ಅಕ್ರಮಿ ಮದಿನಿ ನದ್ವಿ, ಮುಸ್ಲಿಮ್ ಕಮ್ಯುನಿಟಿ ಜಿದ್ದಾ ಇದರ ಅಧ್ಯಕ್ಷ ಖಮರ್ ಸಾದಾ ಮತ್ತಿತರರು ವೇದಿಕೆಯಲ್ಲಿ ಉಪಸ್ತಿತರಿದ್ದರು.

Read These Next