ಭಟ್ಕಳ; ಲಾಡ್ಜೊಂದರಲ್ಲಿ ತಂಡದಿಂದ ಯುವಕನ ಬರ್ಬರ ಹತ್ಯೆ

Source: sonews | By Staff Correspondent | Published on 20th October 2019, 12:11 AM | Coastal News | Incidents | Don't Miss |


•    ಓರ್ವ ಪೊಲೀಸ್ ವಶಕೆ? ನಾಲ್ವರು ಪರಾರಿ!!!

ಭಟ್ಕಳ: ಇಲ್ಲಿನ ಜನನಿಭಿಡ ಪ್ರದೇಶವಾಗಿರುವ ರಾ.ಹೆ.66ರ ಶಾನುಭಾಗ ರೆಸಿಡೆನ್ಸಿ ಲಾಡ್ಜಿಂಗ್ & ಬೋರ್ಡಿಂಗ್ ನ 114 ಕೋಣೆಯಲ್ಲಿ ಐವರ ತಂಡವೊಂದು ಯುವಕನನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಶನಿವಾರ ರಾತ್ರಿ 9.30ರ ಆಸುಪಾಸು ಜರಗಿದ್ದು ಈ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ನಾಲ್ವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. 

ಕೊಲೆಯಾಗಿರುವ ಯುವಕನನ್ನು ಪುರವರ್ಗ ಪಂಚಾಯತ್ ವ್ಯಾಪ್ತಿಯ ಮುಗ್ಲಿಹೊಂಡ ನಿವಾಸಿ ಅಫ್ಫಾನ್ ಜಬಾಲಿ ಬಿನ್ ನವರಂಗ್ ಮುಹಮ್ಮದ್ ಅಲಿ(25) ಎಂದು ಗುರುತಿಸಲಾಗಿದೆ.

ಮೃತ ಯುವಕನ ಸಹೋದರ ನಬೀಲ್ ನೀಡಿದ ಮಾಹಿತಿಯಂತೆ, 9.30 ಸುಮಾರು ತನ್ನ ಸಹೋದರ ಅಪ್ಫಾನ್‍ನಿಂದ  ತನ್ನ ಮೊಬೈಲ್‍ಗೆ ಕರೆ ಬಂದಿದ್ದು ನನಗೆ ಲಾಡ್ಜ್ ನಲ್ಲಿ ಕೂಡಿ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದು ನಾನು ಲಾಡ್ಜಿಗೆ ತಲುವಷ್ಟರಲ್ಲಿ ನನ್ನ ಸಹೋದರ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ ನನ್ನನ್ನು ನೋಡಿದ ತಕ್ಷಣ ನಾಲ್ವರು ಪರಾರಿಯಾಗಿದ್ದಾರೆ ಇನ್ನೋರ್ವ ಇಲ್ಲೆ ಕೆಳಗಡೆ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ನೀಡಿದ್ದಾನೆ. ಘಟನೆಯ ಸುದ್ದಿ ಕಾಡ್ಗಿಚ್ಚಿನಂತೆ ಊರು ತುಂಬ ಹರಡಿಕೊಂಡಿದ್ದು ಸಾವಿರಾರು ಮಂದಿ ಲಾಡ್ಜ್ ಮುಂದೆ ಸೇರಿದ್ದು ಜನರನ್ನು ಚದುರಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಡುವಂತಾಯಿತು. 

ಆಕ್ರೋಶಿತ ಯುವಕರು ಕೆಲಸಮಯ ಘಟನಾ ಸ್ಥಳದಲ್ಲಿ ಕೂಗಾಡುತ್ತಿದ್ದು ತ್ವೇಷಮಯ ವಾತವರಣ ನಿರ್ಮಾಣವಾಗಿತ್ತು. ಸಹಾಯಕ ಪೊಲೀಸ್ ಅಧೀಕ್ಷ ನಿಖಿಲ್, ಪಿ.ಎಸ್.ಐ ಕುಡಗುಂಡಿ ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಗೂ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಮುಖಂಡರು ಯುವಕರನ್ನು ನಿಯಂತ್ರಸಿ ವಾತವರಣ ತಿಳಿಗೊಳಿಸಿದರು. 

ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ: ಯುವಕನ ಕೊಲೆ ಯಾತಕ್ಕಾಗಿ ನಡೆಯಿತು? ಹಣ ವ್ಯವಹಾರವೇನಾದರೂ ಇದರಲ್ಲಿ ಕೆಲಸ ಮಾಡಿರಬಹುದೇ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ವಿವರ ಪೊಲೀಸ್ ತನಿಖೆಯಿಂದಲೇ ತಿಳಿದುಬರಬೇಕಾಗಿದೆ. 

Read These Next

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಕಾರವಾರ: ಉದ್ಯಮಿಯ ಹತ್ಯೆ, ಪತ್ನಿಗೆ ಗಂಭೀರ ಗಾಯ – ಹಣಕೋಣ ಗ್ರಾಮದಲ್ಲಿ ದುಷ್ಕರ್ಮಿಗಳ ದಾಳಿ

ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ಇಂದು ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ಉದ್ಯಮಿ ವಿನಾಯಕ ನಾಯ್ಕ (54) ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.