ಭಟ್ಕಳ ತಾಲೂಕು ಮಟ್ಟದ ವಿಜ್ಞಾನವಸ್ತು ಪ್ರದರ್ಶನ ಫಲಿತಾಂಶ
ಭಟ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಆಯೋಜಿಸಿದ್ದ 2018-19ನೇ ಸಾಲಿನ ಭಟ್ಕಳ ತಾಲೂಕು ಮಟ್ಟದ ವಿಜ್ಞಾನವಸ್ತು ಪ್ರದರ್ಶನ ಸಾಗರ್ ರಸ್ತೆಯ ಆನಂದಾಶ್ರಮ ಪ್ರೌಢಶಾಲೆಯಲ್ಲಿ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ವಿಷಯ ಸಂಯೋಜಕ ಎಸ್.ಪಿ.ಭಟ್ ಸೇರಿಂದತೆ ವಿವಿಧ ಶಾಲೆಗಳ ಮುಖ್ಯೋದ್ಯಾಪಕರು ಉಪಸ್ಥಿತರಿದ್ದರು.
ಫಲಿತಾಂಶ:
ವ್ಯವಸಾಯ ಮತ್ತು ಸಾವಯವ ಕೃಷಿ ವಿಭಾಗದಲ್ಲಿ ಆನಂದಾಶ್ರಮ ಪ್ರೌಢಶಾಲೆಯ ವಿಶ್ರಾಂತ್ ಮತ್ತು ಆಫಿಫ್ ಖಾಜಿ ಪ್ರಥಮ, ಸರಕಾರಿ ಪ್ರೌಢಶಾಲೆ ಬೈಲೂರು ದೀಕ್ಷಾ ದೇವಾಡಿಗ ಮತ್ತು ಆಶಾ ನಾಯ್ಕ ದ್ವಿತೀಯಾ, ಎನ್.ಇ.ಎಸ್. ಪ್ರೌಢಶಾಲೆಯ ಪ್ರಿಯಾಂಕಾ ಕಾಮತ್ ಮತ್ತು ಪುಷ್ಪಾ ನಾಯ್ಕ ತೃತೀಯಾ ಬಹುಮಾನ ಪಡೆದುಕೊಂಡರು.
ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದಲ್ಲಿ ಆರ್.ಎನ್.ಎಸ್. ಪ್ರೌಢಶಾಲೆ ಮುರ್ಢೇಶ್ವರದ ರವಿಚಂದ್ರ ನಾಯ್ಕ, ಪೂರ್ಣಚಂದ್ರ ನಾಯ್ಕ ಪ್ರಥಮ, ಆನಂದಾಶ್ರಮ ಶಾಲೆಯ ಆದಿತ್ಯ ಮತ್ತು ಹೃತಿಕ್ ದ್ವಿತೀಯಾ, ನ್ಯೂ ಶಮ್ಸ್ ಸ್ಕೂಲ್ ನ ಸಾಯೀಫ್ ಮತ್ತು ಅಬ್ದುಲ್ ಕಾದಿರ್ ತೃತಿಯಾ ಬಹುಮಾನ ಪಡದುಕೊಂಡರು.
ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದಲ್ಲಿ ಆನಂದಾಶ್ರಮ ಶಾಲೆಯ ಪ್ರಜ್ವಲ್ ಮತ್ತು ಆರ್.ಎಸ್. ಶ್ರೇಯಾಂಕ್ ನಾಯ್ಕ ಪ್ರಥಮ, ಸರ್ಕಾರಿ ಪ್ರೌಢಶಾಲೆ ಸೋನಾರಕೇರಿಯ ಅತುಲ್ ಪೈ ಮತ್ತು ಧನುಶ್ರೀ ದ್ವಿತೀಯಾ, ಜನತಾ ವಿದ್ಯಾಲಯಾ ಮುರುಡೇಶ್ವರ ವಿಶಾಲ ಹತಿಕಾಂತ್ ಮತ್ತು ಚೇತನ ನಾಯ್ಕ ತೃತಿಯಾ ಬಹುಮಾನ ಪಡೆದುಕೊಂಡರು.
ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಶಿರಾಲಿಯ ಶ್ರೀವಲಿ ಪ್ರೌಢಶಾಲೆಯ ಕಿರಣ ಭೋವಿ ಮತ್ತು ಶಶಾಂಕ ನಾಯ್ಕ ಪ್ರಥಮ, ಆನಂದಾಶ್ರಮ ಶಾಲೆಯ ತೇಜಸ್ವಿನಿ ಮತ್ತು ಪ್ರಜ್ಞಾ ನಾಯ್ಕ ದ್ವಿತೀಯಾ ಬಹುಮಾನ.
ಸಾರಿಗೆ ಮತ್ತು ಸಂಪರ್ಕ ವಿಭಾಗದಲ್ಲಿ ಆನಂದಾಶ್ರಮ ಶಾಲೆಯ ಚರಣ ದಾಮೋದರ್ ನಾಯ್ಕ ಮತ್ತು ಶಶಾಂಕ್ ಭಟ್ ಪ್ರಥಮ, ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಕುಬೈಬ್ ಆಹ್ಮದ್ ಮತ್ತು ಸುಹೇಲ್ ರಹಮಾನ್ ದ್ವಿತೀಯಾ, ಶಿವಶಾಂತಿಕ ಮಾರುಕೇರಿ ಶಾಲೆಯ ಶಶಾಂಕ್ ಹೆಬ್ಬಾರ್ ಮತ್ತು ಕಪಿಲ್ ಭಟ್ ತೃತಿಯಾ ಬಹುಮಾನ.
ಗಣಿತ ಮಾದರಿ ವಿಭಾಗದಲ್ಲಿ ಮುಂಡಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾ ನಾಯ್ಕ ಮತ್ತು ಮೋನಿಶಾ ನಾಯ್ಕ ಪ್ರಥಮ, ಮುರುಢೇಶ್ವರ ಆರ್.ಎನ್.ಎಸ್. ಶಾಲೆಯ ಅಮಿತ ಆಚಾರ್ಯ ಮತ್ತು ಸುಹಾಸ್ ಕುಮಾರ್ ದ್ವಿತೀಯಾ, ಸೋನಾರಕೇರಿ ಶಾಲೆಯ ಲೂಯೀಸ್ ಮತ್ತು ಗೌತಮಿ ನಾಯ್ಕ ತೃತೀಯಾ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.