ಕಟಗಾರಕೊಪ್ಪ ಜನ ಸಂಪರ್ಕ ಸಭೆಯಲ್ಲಿ  ಸಮಸ್ಯೆಗಳ ಮಹಾಪುರ 400ಕ್ಕೂ ಅಧಿಕ ಅರ್ಜಿ ಸ್ವೀಕೃತ

Source: SOnews | By Staff Correspondent | Published on 30th September 2024, 4:13 PM | Coastal News |

ಜನರ ಸಮಸ್ಯೆಗಳ ಪರಿಹಾರಕ್ಕಾಗಿಯೇ ಜನಸಂಪರ್ಕ ಸಭೆ-ಸಚಿವ ಮಂಕಾಳ್ ವೈದ್ಯ

ಭಟ್ಕಳ: ಭಟ್ಕಳ ತಾಲೂಕಿನ ಕಟಗಾರಕೊಪ್ಪಾ ಪ್ರದೇಶದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ವೈದ್ಯ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಸಾರ್ವಜನಿಕರಿಂದ ನಾನಾ ಸಮಸ್ಯೆಗಳ ಕುರಿತು 400ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, "ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ. ಇದುವರೆಗೆ ನನ್ನ ಕ್ಷೇತ್ರದಲ್ಲಿ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದು, ಜನರ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದೇನೆ. ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುತ್ತಿದ್ದೇನೆ" ಎಂದು ತಿಳಿಸಿದರು.

ಸರಕಾರದ ಸೌಲಭ್ಯಗಳ ಸದುಪಯೋಗ ಸಮಾಜದ ಕಟ್ಟ ಕಡೆಯ ಜನರಿಗೂ ತಲುಪಲಿ ಎಂಬುದು ನನ್ನ ಆಶಯ, ಯಾವುದೇ ಸಂದರ್ಭದಲ್ಲೂ ಬಡವರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬಾರದು. ನಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಡೀ ಜಿಲ್ಲಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಸರಕಾರ ಬಡವರಿಗಾಗಿ ಖಾತ್ರಿ ಯೋಜನೆ ಜಾರಿಗೊಳಿಸಿದ್ದರೆ ಅದರ ಪ್ರಯೋಜನ ಬಡವರಿಗೆ ತಲುಪಬೇಕು. ಸಾರ್ವಜನಿಕ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಅದೇ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದರು.

ಕಟಗಾರ ಕೊಪ್ಪದಲ್ಲಿ ಜನರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ ಮನವಿಗಳಲ್ಲಿ ಮನೆ ದುರಸ್ತಿ, ಸೇತುವೆಗಳ ನಿರ್ಮಾಣ, ಬಾವಿಗಳ ತೋಡುವಿಕೆ, ಸಂಧ್ಯಾ ಸರಕ್ಷಾ ಸೇರಿದಂತೆ ಹಲವು ಸಮಸ್ಯೆಗಳು ಸೇರಿವೆ. ಸಚಿವರು ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿದರು. ಇತರೆ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸರ್ಕಾರಿ ಇಲಾಖೆಯೊಂದಿಗೆ ಚರ್ಚಿಸಿ ಪರಿಹರಿಸುವಂತೆ ತಮ್ಮ ಆಪ್ತ ಕಾರ್ಯದರ್ಶಿಗೆ ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಕೊಪ್ಪ ಗ್ರಾ.ಪಂ.ಅಧ್ಯಕ್ಷ ಮಾಸ್ತಿಗೊಂಡ, ಗ್ರಾ.ಪಂ.ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಖಾತರಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ರಾಜುನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

 

 

 

Read These Next

ಕಾರವಾರ: ಅನುಸೂಚಿತ ಜಾತಿ ಮತ್ತು ಪಂಗಡ ಉಪ ಹಂಚಿಕೆ ಯೋಜನೆಯಲ್ಲಿ 100% ಗುರಿ ಸಾಧಿಸಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಅನುಸೂಚಿತ ಪಂಗಡ ಉಪ ಹಂಚಿಕೆ ...

ಭಟ್ಕಳ: ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಚಾಲನೆ

ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ...

ಭಟ್ಕಳ: ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ:70 ವರ್ಷದ ವೃದ್ಧೆ ಸ್ಥಿತಿ ಗಂಭೀರ

ಇಲ್ಲಿನ ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದರೆ ಇನ್ನೊಂದು ಪ್ರಕರಣ ಬಂಗಾರಮಕ್ಕಿ ಕ್ರಾಸ್ ಬಳಿ ...

ಭಟ್ಕಳದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವವವ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್.ಡಿ.ಪಿ.ಐ ಆಗ್ರಹ

ಭಟ್ಕಳ: ಭಟ್ಕಳ ತಾಲೂಕಿನ ಜಾಲಿಪಟ್ಟಣ ಪಂಚಾಯತ್ ನ ಏಕೈಕ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ಕಾಝಿಯಾ ಅಪ್ಸ ಹುಝೈಫಾ ವಿರುದ್ಧ ಸಾಮಾಜಿಕ ...