ಭಟ್ಕಳ: ಉತ್ತರಕನ್ನಡ ಬಿಜೆಪಿ ಟಿಕೇಟ್ ಹಿಂದುಳಿದ ವರ್ಗಕ್ಕೆ ನೀಡಲಿ : ಶ್ಯಾಮಸುಂದರ

Source: S O News | By I.G. Bhatkali | Published on 18th January 2024, 6:38 PM | Coastal News | Don't Miss |

ಭಟ್ಕಳ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮರಾಠ, ನಾಯ್ಕ, ಮೀನುಗಾರ ಸೇರಿದಂತೆ ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರ ಸಂಖ್ಯೆ ದೊಡ್ಡದಿದ್ದು, ಈ ಬಾರಿ ಬಿಜೆಪಿ ಟಿಕೇಟ್ ಅನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಮುಖಂಡ ವಿ.ಎಸ್.ಶ್ಯಾಮಸುಂದರ ಗಾಯಕ್‍ವಾಡ್ ಆಗ್ರಹಿಸಿದ್ದಾರೆ.

 `ಶ್ಯಾಮಸುಂದರ ಅವರಿಗೆ ಬಿಜೆಪಿ ಶಕ್ತಿ ನೀಡಬೇಕು'
ಶ್ರೀರಾಮ ಎಲ್ಲರ ಮನಸ್ಸು, ಹೃದಯದಲ್ಲಿ ನೆಲೆಸಿದ್ದಾನೆ. ರಾಮರಥವನ್ನು ಪ್ರತಿ ತಾಲೂಕಿಗೆ ಕೊಂಡೊಯ್ಯುತ್ತಿರುವ ಶ್ಯಾಮಸುಂದರ ಗಾಯಕ್‍ವಾಡ್ ಅವರಿಗೆ ಬಿಜೆಪಿ ಶಕ್ತಿ ನೀಡಬೇಕು ಎಂದು ಮುಂಡಗೋಡ ಸಾಲಗಾಂವ ಗೌರಮ್ಮಾಜಿ ಮಠದ ಶ್ರೀ ವಿರೂಪಾಕ್ಷ ಸ್ವಾಮೀಜಿ ಆಗ್ರಹಿಸಿದ್ದಾರೆ. ಛತ್ರಪತಿ ಶಿವಾಜಿಯನ್ನು ಎಲ್ಲರೂ ಗೌರವಿಸುತ್ತಾರೆ. ಅವರ ಕ್ಷತ್ರಿಕ ಸಮಾಜಕ್ಕೆ ಅಧಿಕಾರ ನೀಡಬೇಕು ಎಂದರು.  

 

ಅವರು ಬುಧವಾರ ಇಲ್ಲಿನ ರಾಯಲ್ ಓಕ್ ಹೊಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಹಿಂದುಳಿದ ವರ್ಗಕ್ಕೆ ನೀಡಿರಲಿಲ್ಲ. ಈ ಬಾರಿ ಅಂತಹ ಕೆಲಸ ಮಾಡಬಾರದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರವಿದ್ದು, ಗೆಲುವಿಗಾಗಿ ಹೋರಾಟ ನಡೆಸಲೇ ಬೇಕಾಗುತ್ತದೆ. ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಧಾರವಾಡ, ಬೀದರ ಜಿಲ್ಲೆಗಳಲ್ಲಿ ಮರಾಠ ಸಮುದಾಯದ ಪ್ರಾಬಲ್ಯ ಇದೆ. ಅಲ್ಲದೇ ಮರಾಠ ಸಮುದಾಯಕ್ಕೆ ಟಿಕೇಟ್ ನೀಡುವುದರಿಂದ ಇತರೇ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಅನುಕೂಲವಾಗಲಿದೆ ಎಂದರು.

ಮಲಗಿದ್ದ ಅನಂತಕುಮಾರ ಎದ್ದು ಓಡಾಡುತ್ತಿದ್ದಾರೆ:
ಸಂಸದ ಅನಂತಕುಮಾರ ಹೆಗಡೆ ತಾವು ಸಂಸದರಾಗಿದ್ದ ಅವಧಿಯಲ್ಲಿ ಮಲಗಿಕೊಂಡೇ ಇದ್ದರು. ಚುನಾವಣೆ ಹತ್ತಿರವಾದಂತೆ ಎದ್ದು ಓಡಾಡಲು ಆರಂಭಿಸಿದ್ದಾರೆ. ಕಳೆದ 7 ಚುನಾವಣೆಯಲ್ಲಿಯೂ ಮರಾಠ ಸಮುದಾಯ ಅನಂತಕುಮಾರ ಹೆಗಡೆಯವರನ್ನು ಬೆಂಬಲಿಸುತ್ತ ಬಂದಿದೆ. ನಾನು ಕಳೆದ 30 ವರ್ಷಗಳಿಂದ ಬಿಜೆಪಿ ಬೆಳವಣಿಗೆಗಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ರಾಜ್ಯ ಕೊಳಚೆ ಪ್ರದೇಶದ ಅಭಿವೃದ್ಧಿಗಾಗಿ ದುಡಿದ್ದೇನೆ. ಬೆಂಗಳೂರು ಅನಂತಕುಮಾರ ಅವರ ಸಹಾಯವನ್ನು ಪಡೆದುಕೊಂಡು ಛತ್ರಪತಿ ಶಿವಾಜಿ ತಂದೆಯವರ ಸಮಾಧಿಅಭಿವೃದ್ಧಿಗೆ ಶ್ರಮಿಸಿದ್ದೇನೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಮರಾಠ ಸಮುದಾಯ ಬೆಂಬಲಿಸಿದೆ. 4 ಎಮ್ಮೆಲ್ಲೆಗಳನ್ನು ಹೊಂದಿದ್ದ ಬಿಜೆಪಿ 36 ನಂತರ, 110 ಆಗಲು ಮರಾಠ ಸಮಾಜದ ಬೆಂಬಲವೂ ಕಾರಣವಾಗಿದೆ. ಈ ಬಾರಿ ಅನಂತಕುಮಾರ ಹೆಗಡೆಯವರೇ ಹಿಂದೆ ಸರಿದು ನನಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

Read These Next

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.