ಮಣ್ಕುಳಿ ಭಾರತ್ ಗ್ಯಾಸ್ ಏಜೆನ್ಸಿಗೆ ನುಗ್ಗಿದ ಕಳ್ಳರು:5 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿ

Source: SO News | By MV Bhatkal | Published on 3rd January 2024, 9:49 PM | Coastal News | Don't Miss |

ಭಟ್ಕಳ:ತಾಲ್ಲೂಕಿನಲ್ಲಿ ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 66ರ  ಮಣ್ಕುಳಿ ಪುಷ್ಪಾಂಜಲಿ ಕ್ರಾಸ್ ಸಮೀಪದ  ಶ್ರೀ ಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿಗೆ ನುಗ್ಗಿದ ಮೂವರು ಮುಸುಕು ದಾರಿ ಕಳ್ಳರು ಬಾಗಿಲು ಒಡೆದು 5 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದು ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ದಿನಕರ ವಿಠಲ್ ಕಿಣಿ  ಮಾಲೀಕತ್ವದ ಗ್ಯಾಸ್ ಏಜೆನ್ಸಿ ಇದಾಗಿದೆ. ಕಳೆದ ತಿಂಗಳು ಇದೆ ಭಾಗದಲ್ಲಿ ಗ್ಯಾರೇಜ್ ಒಂದರಲ್ಲಿ ಕಳ್ಳತನ ಘಟನೆಯಾದ ಬಳಿಕ ಏಜೆನ್ಸಿ ಮಾಲೀಕರು ತಮ್ಮ ದಿನ ನಿತ್ಯದ ವ್ಯವಹಾರದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಆದರೆ ಮಂಗಳವಾರ ಅತಿಯಾದ ಕೆಲಸದ ಒತ್ತಡದಿಂದ ಹಣವನ್ನು ತಮ್ಮ ಗ್ಯಾಸ್ ಏಜೆನ್ಸಿ ಅಂಗಡಿಯಲ್ಲೇ ಇಟ್ಟು ಭಾಗಿಲು ಹಾಕಿ ತೆರಳಿದ್ದರು.

ಮಾಲೀಕರ ದುರಾದ್ರಷ್ಟವೋ ಕಳ್ಳರ ಅದ್ರಷ್ಟವೋ ಗೊತ್ತಿಲ್ಲ ಬುದುವಾರ ಬೆಳಗಿನ ಜಾವದ ವೇಳೆಯಲ್ಲಿ    ಮೂವರು ಕಳ್ಳರು ಮುಸುಕು ಹಾಗೂ ಕೈಗೆ ಗ್ಲೊಜ್ ಧರಿಸಿ ಗ್ಯಾಸ್ ಏಜೆನ್ಸಿಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಅದರಲ್ಲಿ ಓರ್ವ ಹೊರಗಡೆ ನಿಂತು ಕಾಯುತ್ತಿದ್ದರೆ. ಇನ್ನಿಬ್ಬರು ಒಳಗೆ ನುಗ್ಗಿ  ನೇರವಾಗಿ ಏಜೆನ್ಸಿ ಮಾಲೀಕನ ಚೇಂಬರ್ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಇರುವುದರಿಂದ ಕೊನೆಗೆ ಬಾಗಿಲಿಗೆ ಅಳವಡಿಸಿದ ಗ್ಲಾಸ್ ಒಡೆದು ಚೇಂಬರನಲ್ಲಿದ್ದ ಸುಮಾರು 5,11,742 ನಗದು ದೋಚಿ ಪರಾರಿಯಾಗಿದ್ದಾರೆ.
ಮುಂಜಾನೆ ಗ್ಯಾಸ್ ಏಜೆನ್ಸಿ ಗೆ ಬಂದ ಮಾಲೀಕರಿಗೆ ಕಳ್ಳತನವಾಗಿರುವ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸಿಪಿಐ ಗೋಪಿ ಕೃಷ್ಣ,ನಗರ ಠಾಣೆ ಪಿ.ಎಸ್.ಐ ಯಲ್ಲಪ್ಪ,ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.  ಪಿ.ಎಸ.ಐ  ವಿದಿ ವಿಜ್ಞಾನ ಪ್ರಯೋಗಾಲದ ಸಿ ಆಪ್  ಕೈಂ ಅಧಿಕಾರಿ ವಿನಿತಾ,ಬೆರಳಚ್ಚು ತಜ್ಞರು ಮುಂತಾದವರು ಉಪಸ್ಥಿತಿ ಇದ್ದರು.ಶ್ವಾನ ಏಜೆನ್ಸಿ ಇಂದ ಮಣ್ಕುಳಿ ಸರ್ಕಲ್ ಮಾರ್ಗವಾಗಿ ನೇರ ಮೂಢಭಟ್ಕಳ ತನಕ ತೆರಳಿ ಪುನಃ ಗ್ಯಾಸ್ ಏಜೆನ್ಸಿಗೆ ಮರಳಿತು ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಭಟ್ಕಳದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವವವ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್.ಡಿ.ಪಿ.ಐ ಆಗ್ರಹ

ಭಟ್ಕಳ: ಭಟ್ಕಳ ತಾಲೂಕಿನ ಜಾಲಿಪಟ್ಟಣ ಪಂಚಾಯತ್ ನ ಏಕೈಕ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ಕಾಝಿಯಾ ಅಪ್ಸ ಹುಝೈಫಾ ವಿರುದ್ಧ ಸಾಮಾಜಿಕ ...

ಭಟ್ಕಳ: ಎಐಟಿಎಂನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್

ಭಟ್ಕಳ: ಮಂಗಳೂರಿನ ಇನ್‌ಯೂನಿಟಿಯ ಸಹಯೋಗದಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ (AITM) ಮೊದಲ ...

ಭಟ್ಕಳ: ನ್ಯಾಯಾಧೀಶರ ಮಾನವೀಯತೆ - ನಾಲ್ಕು ವರ್ಷಗಳಿಂದ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ನೆರವಾದ ಕಾನೂನು ಸೇವಾ ಸಮಿತಿ

ಭಟ್ಕಳ: ಭಟ್ಕಳದಲ್ಲಿ ನಾಲ್ಕು ವರ್ಷಗಳಿಂದ ರಸ್ತೆಯ ಬದಿಯಲ್ಲಿ ಹರಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ...