ವಿದ್ಯುತ್ ದರ ಹೆಚ್ಚಳ; ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಭಟ್ಕಳ ಬಂದ್ ಮಾಡಲು ಜನಾಭಿಪ್ರಾಯ ಸಂಗ್ರಹ

Source: SOnews | By Staff Correspondent | Published on 24th June 2023, 7:58 PM | Coastal News |

ಭಟ್ಕಳ : ಭಟ್ಕಳ ತಾಲ್ಲೂಕು ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಭಟ್ಕಳ ಇದರ ನೇತೃತ್ವದಲ್ಲಿ ಭಟ್ಕಳಅರ್ಬನ ಬ್ಯಾಂಕ ಹಾಫಿಸ್ಕಾ ಹಾಲ್ ನಲ್ಲಿ ಕರೆಯಲಾಗಿದ್ದ ಸಾರ್ವಜನಿಕ ಸಭೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಂಡಿತು.

ವಿದ್ಯುತ್ ಪ್ರಸರಣ ನಿಗಮದ ದರ ಎರಿಕೆಯ ಕುರಿತು ಸಾಕಷ್ಟು ಚರ್ಚೆ ನಡೆಯಿತು. ದರ ಎರಿಕೆಯಿಂದಾಗಿ ಜನ ಜೀವನ ತಿವ್ರ ಬಿಗಡಾಯಿಸುವುದು. ಅಷ್ಟೇ ಅಲ್ಲದೆ ವಿದ್ಯುತ್ ಆಧಾರಿತ ಉದ್ಯಮಗಳು ತಮ್ಮ ಉತ್ಪನ್ನದ ದರ ಎರಿಸುವುದು.  ಅಕ್ಕಿ ಗಿರಣಿಯವರು ಅಕ್ಕಿ ದರವನ್ನು ಎರಿಸುವ  ಅನಿವಾರ್ಯಕ್ಕೆ ಬರಬೇಕಾಗಬಹುದು. ಇದರಿಂದ ಸಂಪೂರ್ಣ ಆರ್ಥಿಕ ವ್ಯವಸ್ಥೆ ಅಪಾಯಕ್ಕೆ ಸಿಲುಕುವ ಸಾದ್ಯತೆ ಇರುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ;ಪಡಿಸಿದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಮಂಜುನಾಥ ವಿದ್ಯುತ ದರ ಎರಿಕೆಯ ಸಂಪೂರ್ಣ ವಿವರಣೆ ನೀಡಿದರು. ಮಾರ್ಚ ತಿಂಗಳಲ್ಲಿ ವಿದ್ಯುತ ದರ ಎರಿಕೆಯ ಕ್ರಮ ಕೈಗೊಂಡಿದ್ದು, ಜೂನ್ ನಲ್ಲಿ ನೂತನ ದರ ಜ್ಯಾರಿ ತರಲಾಗಿರುತ್ತದೆ.  ಈ ಹಿಂದೆ ಇದ್ದ ಸ್ಲಾಬ್ ಪದ್ದತಿ ರದ್ದಾಗಿದ್ದು ಒಂದೇ ಸ್ಯ್ಲಾಬ್ ನಲ್ಲಿ ದರ ನಿಗದಿತ ವಾಗಿರುತ್ತದೆ. ಎಂದು ವಿವರಿಸಿದರು. ಜೊತೆಗೆ ಗೃಹ ಜ್ಯೋತಿಯ ಬಗ್ಗೆ ವಿವರಿಸಿದರು.

ದರ ಹೆಚ್ಚಳದ ಕುರಿತು ಗಂಭೀರವಾಗಿ ಚರ್ಚಿಸಿದ ಸಾರ್ವಜನಿಕರು ಭಟ್ಕಳ ಬಂದ ಕರೆ ನೀಡಿ ಪ್ರತಿಭಟಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸ ಬೇಕು. ಇಂದನ ದರ ಎರಿಕೆಯಿಂದಾಗಿ ಜನ ಜೀವನ ದುಸ್ಥರವಾಗಿದೆ. ಅದರೊಂದಿಗೆ ವಿದ್ಯುತ್ ದರ ಎರಿಸುವ ಮೂಲಕ ಬಡ ಜನರನ್ನು ಮೃತ್ಯು ಕೂಪಕ್ಕೆ ತಳ್ಳಿದಂತಾಗಿದೆ. ಅತೀ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಿ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಳ್ಳಲು ನಾಗರಿಕ ಹಿತರಕ್ಷಣಾ ಸಮಿತಿಗೆ ಅಧಿಕಾರ ನೀಡಿದರು.

ಸಭೆಯಲ್ಲಿ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ, ಕಾರ್ಯದರ್ಶಿ ಇಮ್ರಾನ್ ಲಂಖಾ, ಮಜ್ಲಿಸೆ ಇಸ್ಲಾ ಒ ತಂಜಿಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ಕಾರ್ಯದರ್ಶಿ ಎಂ.ಜೆ.ರಖೀಬ್, ಯುತ್ ಫೆಡರೇಶನ ಅಧ್ಯಕ್ಷ ಅಜೀಜುರೆಹಮಾನ್ , ರಿಕ್ಷಾ ಚಾಲಕ ಮಾಲಕ ಸಂಘದಅಧ್ಯಕ್ಷ ಹಾಗೂ ನಾಮಧಾರಿ ಅಭಿವೃದ್ದಿ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ,ಅರ್ಬನ ಬ್ಯಾಂಕ ಉಪಾಧ್ಯಕ್ಷ ಎಮ. ಆರ. ನಾಯ್ಕ ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ ಶ್ಯಾನಭಾಗ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೆದ್ದಾರಿ ಕಾಮಾಗಾರಿ ಪೂರ್ಣಗೊಳಿಸುವಂತೆ ಹೆದ್ದಾರಿ ಹೋರಾಟ ಸಮಿತಿ ಆಗ್ರಹ

ಭಟ್ಕಳ : ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಭಟ್ಕಳ ತಾಲ್ಲೂಕು ನಾಗರೀಕ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಸಭೆ ಇಲ್ಲಿನ  ಭಟ್ಕಳ ಅರ್ಬನ ಬ್ಯಾಂಕಿನ ಹಾಫಿಸ್ಕಾ ಹಾಲ್ ನಲ್ಲಿ ಶುಕ್ರವಾರ ನಡಯಿತು.

ಸಭೆಯಲ್ಲಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದು ಹೆದ್ದಾರಿ ಅಪೂರ್ಣ ಕಾಮಾಗರಿ ಕುರಿತಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಕಾಮಗಾರಿ ಆರಂಭ ಗೊಂಡು ದಶಕಗಳೆ ಕಳೆಯುತ್ತಿದ್ದರು. ಭಟ್ಕಳದಲ್ಲಿ ಮಾತ್ರ ಹೆದ್ದಾರಿ ಕೇವಲ ಶೆಕಡಾ 50 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಸರಕಾರದ ನಿರ್ಲಕ್ಷವೂ ಕಾರಣವಾಗಿದೆ. ಭಟ್ಳಳ ಪಟ್ಟಣ ಪ್ರದೇಶದಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಷ ಕಾಮಗಾರಿ ನಡೆಸುವ ಮೂಲಕಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.  ಪಿಎಲಡಿ ಬ್ಯಾಂಕಿನ ಎದುರು ಹೆದ್ದಾರಿಯಿಂದ ಭಟ್ಕಳ ಮುಖ್ಯ ರಸ್ತೆಗೆ ತಿರುಗುವಲ್ಲಿ ದಿನಕ್ಕೊಂದು ಅಪಘಾತ ಉಂಟಾಗುತ್ತಿದೆ. ರಂಗಿಕಟ್ಟೆ, ಸಂಸುದ್ದಿನ್ ಸರ್ಕಲ್ ಹಾಗೂ ಮಣಕುಳಿ ಮಾರುತಿ ನಗರದ ಬಳಿ ಮಳೆಗಾಲದ ನೀರು ಹರಿದು ಹೋಗಲು ಕನಿಷ್ಟ ಕಚ್ಚಾ ಗಟಾರೂ ನಿರ್ಮಿಸದಿರುವುದರಿಂದಅಲ್ಪ ಮಳೆಗೂ ಅಪಾರ ಹಾನಿ ಸಂಭವಿಸುವ ಸಾದ್ಯತೆ ಇದೆ.  ಆದರೂ  ರಾ. ಹೆದ್ದಾರಿ ಪ್ರಾಧಿಕಾರ ಇದುವರೆಗೆ ಯಾವೂದನ್ನೂ ಗಂಭಿರವಾಗಿ ಪರಿಗಣಿಸದೆ ಭಟ್ಕಳ ತಾಲ್ಲೂಕನ್ನು ಕಡೆಗಣಿಸಿದಂತೆ ಕಾಣುತ್ತಿದೆ. ನಗರದ ಹೃದಯ ಭಾಗವಾದ ಸಂಸುದ್ದೀನ್ ವೃತ್ತದಲ್ಲಿ ಮೇಲ್ಸೇತುವೆ, ಅಥವಾ ರ್ಯಾಂಪ್  ನಿರ್ಮಿಸುವುದೋ ಅಥವಾ ಪ್ರಸ್ತುತ ಇರುವಂತೆ  ರಸ್ತೆ ಅಗಲೀಕರಣ ಗೊಳಿಸಿ ಕೈತೊಳೆದು ಕೊಳ್ಳುವುದೋ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಜಿಲ್ಲಾಡಳಿತಕ್ಕೇ ಭಟ್ಕಳದ ಕಾಮಗಾರಿಯ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಭಟ್ಕಳ ಉಪವಿಭಾಗಾಧಿಕಾರಿಗಳ ಬಳಿ ಅಳಲು ತೊಡಿಕೊಂಡಿದ್ದು, ಹೆದ್ದಾರಿ ಇಲಾಖೆ ಅಧಿಕಾರಗಳನ್ನು ಸಭೇಗೆ ಆಹ್ವಾನಿಸಿದರೂ ಖ್ಯಾರೆ ಎನ್ನದೆ ಕಡೆಗಣಿಸುತ್ತಿರುವುದು ತೀವ್ರ ಖಂಡನೀಯ ವಿಚಾರ ಎಂದು ಹೆದ್ದಾರಿ ಹೋರಾಟ ಸಮೀತಿ ಸಂಚಾಲಕ ರಾಜೇಶ ನಾಯಕ್ ವಿವರಿಸಿದರು.

ಸದರಿ ವಿಷಯದ ಕುರಿತು ಗಂಭೀರವಾಗಿ ಚರ್ಚಿಸಿದ ಸಭೆ  ಅತಿ ಶೀಘ್ರವಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ  ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸಭೆಯಲ್ಲಿ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ, ಕಾರ್ಯದರ್ಶಿ ಇಮ್ರಾನ್ ಲಂಖಾ, ಮಜ್ಲಿಸೆ ಇಸ್ಲಾ ಒ ತಂಜಿಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ಕಾರ್ಯದರ್ಶಿ ಎಂ.ಜೆ.ರಖೀಬ್, ಯುತ್ ಫೆಡರೇಶನ ಅಧ್ಯಕ್ಷ ಅಜೀಜುರೆಹಮಾನ್ , ರಿಕ್ಷಾ ಚಾಲಕ ಮಾಲಕ ಸಂಘದಅಧ್ಯಕ್ಷ ಹಾಗೂ ನಾಮಧಾರಿ ಅಭಿವ್ರದ್ದಿ ಸಂಘದಅಧ್ಯಕ್ಷ ಕೃಷ್ಣ ನಾಯ್ಕ,ಅರ್ಬನ ಬ್ಯಾಂಕ ಉಪಾಧ್ಯಕ್ಷ ಎಮ. ಆರ. ನಾಯ್ಕ ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ ಶ್ಯಾನಭಾಗ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read These Next

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಮರಳು ಸಮಸ್ಯೆ ಶಾಶ್ವತ ಪರಿಹಾರವನ್ನು ಕೊಡಲು ಕಾರ್ಮಿಕರ ಒಕ್ಕೂಟದ ಆಗ್ರಹ

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಮೂಲ ವಸ್ತುವಾಗಿ ಅತೀ ಮುಖ್ಯ ಪಾತ್ರವಹಿಸಿದೆ. ಆದರೆ, ಸರಕಾರ ಮತ್ತು ಸ್ಥಳೀಯಾಡಳಿತದ ಅವೈಜ್ಞಾನಿಕ ...

ಕಾರವಾರ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೊಂದಣಿ ಕೇಂದ್ರ ತೆರೆಯಿರಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಲ್ಲಿ ಜಿಲ್ಲೆಯ ರೈತರಿಂದ ಭತ್ತ ಖರೀದಿ ಮಾಡುವ ಕುರಿತಂತೆ, ನೊಂದಣಿ ...

ಕಾರವಾರ: ಹಾಸ್ಟೆಲ್ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ : ಎಸ್.ಕೆ. ವಂಟಿಗೋಡಿ

ವಿದ್ಯಾಭ್ಯಾಸಕ್ಕಾಗಿ ತಮ್ಮ ಪೋಷಕರನ್ನು ಬಿಟ್ಟು ಬಂದು ಹಾಸ್ಟೆಲ್ ಗಳಲ್ಲಿ ನೆಲೆಸಿ, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ...