ನ.7‌ ಕ್ಕೆ ಬೆಂಗಳೂರು ಚಲೋ:ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನಕ್ಕೆ ತೀರ್ಮಾನ-ರವೀಂದ್ರ ನಾಯ್ಕ

Source: SO News | By MV Bhatkal | Published on 18th October 2024, 3:06 PM | Coastal News | Don't Miss |

ಹೊನ್ನಾವರ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಬೇಕು ಮತ್ತು ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ನ. ೭ ರಂದು ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನ ಬೆಂಗಳೂರಿನಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅವರು ಇಂದು ದಿ.೧೭ ರಂದು ಹೊನ್ನಾವರ ತಾಲೂಕಿನ ಮೂಡ ಗಣಪತಿ ದೇವಸ್ಥಾನ ಸಂಭಾಗಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಬೃಹತ್ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಲೆನಾಡಿನ ಮತ್ತು ಕರಾವಳಿ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಮತ್ತು ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸುವದು ಅನಿವಾರ್ಯ ಎಂದು ಅವರು ಹೇಳುತ್ತಾ, ಅರಣ್ಯವಾಸಿಗಳ ಭೂಮಿ ಹಕ್ಕಿನ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದ್ದು ಭೂಮಿ ಹಕ್ಕಿನ ಸಮಸ್ಯೆ ನಿವಾರಣೆ ಕುರಿತು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಸರಕಾರದ ಗಮನ ಸೆಳೆಯುವಲಾಗುವದು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನ ತಾಲೂಕು ಅಧ್ಯಕ್ಷ ಚಂದ್ರಕಾAತ ಪಂಚರೆಕರ್, ಸ್ವಾಗತವನ್ನ ನಗರ ಅಧ್ಷಕ್ಷ ಸುರೇಶ ಮೇಸ್ತಾ, ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ರಾಮ ಮರಾಠಿ, ಸುರೇಶ ನಾಯ್ಕ ಕರ್ನಕೋಡ್, ಸಚೀನ ನಾಯ್ಕ ಸಾಲ್ಕೋಡ, ಮಹೇಶ ನಾಯ್ಕ ಕಾನಕ್ಕಿ, ವಾಮನ ನಾಯ್ಕ ಮಂಕಿ  ಮುಂತಾದವರು ಮಾತನಾಡಿದರು. ವೇದಿಕೆಯ ಮೇಲೆ ವಿನೋದ ನಾಯ್ಕ ಎಲ್ಕೊಟಕಿ,ಸಂಕೇತ(ಬೆಂಕಿ),ಗೀರೀಶ ಚಿತ್ತಾರ,ಆರ್.ಟಿ. ನಾಯ್ಕ ಚಿಕ್ಕನಗೋಡ, ಗಜಾನನ ನಾಯ್ಕ ಸಾಲ್ಕೋಡ,ರಜತ ಶೇಕ್ ಉಪಸ್ಥಿತರಿದ್ದರು.

ಬೃಹತ್ ಸಭೆ:
ತಾಲೂಕಾದ್ಯಂತ ಮೂರು ಸಾವಿರಕ್ಕೂ ಮಿಕ್ಕಿ ಬೃಹತ್ ಅತಿಕ್ರಮಣದಾರರು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಮನೆ ಒಬ್ಬರಂತೆ ಭಾಗವಹಿಸುವಂತೆ ಸಭೆಯಲ್ಲಿ  ನಿರ್ಣಯಿಸಲಾಯಿತ್ತೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Read These Next

ಭಟ್ಕಳ: ಜಾಲಿ ಪ.ಪಂ. ವ್ಯಾಪ್ತಿಯ ಗೋವು ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು; ಮೂವರು ಆರೋಪಿಗಳ ಬಂಧನ

ಭಟ್ಕಳ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರನ್ನು ಪಡಬಿದ್ರಿಯ ಜಬ್ಬಾರ ಹುಸೈನ್ ಬ್ಯಾರಿ (37), ಹಾಗೂ ಭಟ್ಕಳ ನೀವಾಸಿಗಳಾದ ಜಲೀಲ್ ...

ಭಟ್ಕಳ:  ಸಂತೆ ಮಾರುಕಟ್ಟೆ ರಸ್ತೆ ಬದಿ ವ್ಯಾಪರಸ್ಥರ ವಿರುದ್ಧ ಪುರಸಭೆ ಕಟ್ಟುನಿಟ್ಟಿನ ಕ್ರಮ ; ವಾಹನ ಸಂಚಾರ ಸುಗಮ

ಭಟ್ಕಳ: ತಾಲೂಕಿನ ಆಸ್ಪತ್ರೆ ರಸ್ತೆಯಲ್ಲಿ ಪ್ರತೀ ಭಾನುವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ  ವ್ಯಾಪಾರಿಗಳು ರಸ್ತೆ ಬದಿಯಲ್ಲೇ ...