ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

Source: Vb | By I.G. Bhatkali | Published on 19th August 2024, 8:10 AM | National News | Global News |

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಸುದೀರ್ಘ ಕಾಲ ಬಾಂಗ್ಲಾದೇಶವನ್ನು ಆಳಿದ್ದ ಶೇಕ್ ಹಸೀನಾ ಅವರ ಪತನದ ಬಳಿಕ ದೇಶದಲ್ಲಿ ನಡೆಯುತ್ತಿರುವ 'ಹಿಂದೂಗಳ ನರಮೇಧ'ಕ್ಕೆ ಈ ವೀಡಿಯೊಗಳು ಸಾಕ್ಷಿಯಾಗಿವೆ ಎಂದು ಅವುಗಳನ್ನು ಹಂಚಿಕೊಳ್ಳುತ್ತಿರುವವರು ಹೇಳುತ್ತಿದ್ದಾರೆ.

ಟಾಮಿ ರಾಬಿನ್ಸನ್ ಎಂಬ ಹೆಸರನ್ನು ಬಳಸುತ್ತಿರುವ ಬ್ರಿಟಿಷ್ ಕಟ್ಟರ್ ಬಲಪಂಥೀಯ ಕಾರ್ಯಕರ್ತ ಸ್ಟೀಫನ್ ಯಾಫೆ-ಲೆನನ್ ಎಚ್ಚರಿಕೆಗಳ ಜೊತೆಗೆ ವೀಡಿಯೊಗಳನ್ನು ಹಂಚಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಾನೆ. ಇದೇ ಲೆನನ್ ಯಾನೆ ರಾಬಿನ್ಸನ್ ಬ್ರಿಟನ್ ನಲ್ಲಿ ಮುಸ್ಲಿಮರು ಮತ್ತು ವಲಸಿಗರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಗಲಭೆಗಳ ಸಂದರ್ಭ ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ತೀವ್ರ ಟೀಕೆಗಳಿಗೊಳಗಾಗಿದ್ದ.

ಆದರೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿರುವ ಹೆಚ್ಚಿನ ವೀಡಿಯೊಗಳು ಮತ್ತು ಹೇಳಿಕೆಗಳು ಸುಳ್ಳು ಎನ್ನುವುದನ್ನು ಬಿಬಿಸಿ ಬಯಲಿಗೆಳೆದಿದೆ.

ಬಾಂಗ್ಲಾದೇಶದಲ್ಲಿ 600ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆದರಿ ಪ್ರಧಾನಿ ಶೇಕ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ ಬಳಿಕ ಸಂಭ್ರಮಾಚರಣೆ ಸಂದರ್ಭದಲ್ಲಿ ಹಿಂಸಾಚಾರವು ಇನ್ನಷ್ಟು ಉಲ್ಬಣಗೊಂಡಿತ್ತು. ಗಲಭೆಕೋರರು ಹಸೀನಾರ ಅವಾಮಿ ಲೀಗ್ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದು, ಈ ಸದಸ್ಯರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೇರಿದ್ದಾರೆ.

ತಳಮಟ್ಟದ ವರದಿಗಳು ಹಿಂಸಾಚಾರ ಮತ್ತು ಲೂಟಿಗಳು ಹಿಂದೂಗಳು ಮತ್ತು ಅವರ ಆಸ್ತಿಗಳ ಮೇಲೆ ಪರಿಣಾಮವನ್ನುಂಟು ಮಾಡಿದ್ದನ್ನು ಸೂಚಿಸಿದ್ದರೆ, ನೆರೆಯ ಭಾರತದಲ್ಲಿಯ ಕಟ್ಟರ್ ಬಲಪಂಥೀಯ ಪ್ರಭಾವಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಗಳನ್ನು ತಪ್ಪಾಗಿ ಬಿಂಬಿಸುವ ಸುಳ್ಳು ವೀಡಿಯೊಗಳು ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

'ಇಸ್ಲಾಮಿಸ್ಟ್ ಮೂಲಭೂತವಾದಿಗಳು' ಹಿಂಸಾತ್ಮಕ ಅಜೆಂಡಾದೊಂದಿಗೆ ಹಿಂದೂಗಳ ವಿರುದ್ದ ನಡೆಸಿದ ಕೋಮು ಹಿಂಸಾಚಾರವನ್ನು ತಾವು ತೋರಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ವೈರಲ್ ಆಗಿರುವ ಒಂದು ಪೋಸ್ಟ್ ಬಾಂಗ್ಲಾದೇಶದಲ್ಲಿಯ ಇಸ್ಲಾಮಿಸ್ಟ್ ಗಳು ಬೆಂಕಿ ಹಚ್ಚಿರುವ ಹಿಂದೂ ದೇವಸ್ಥಾನವನ್ನು ತೋರಿಸುತ್ತಿರುವುದಾಗಿ ಹೇಳಿಕೊಂಡಿದೆ.

ಆದರೆ ಘಟನೆ ನಿಜವಾಗಿಯೂ ನಡೆದಿದ್ದು ಚಿತ್ತಗಾಂಗ್‌ನ ಅವಾಮಿ ಲೀಗ್ ಕಚೇರಿಯಲ್ಲಿ ಮತ್ತು ವೀಡಿಯೊದಲ್ಲಿ ಹೇಳಿರುವಂತೆ ಸಮೀಪದ ನವಗ್ರಹ ದೇವಸ್ಥಾನಕ್ಕೆ ಯಾವುದೇ ಹಾನಿಯುಂಟಾಗಿಲ್ಲ ಎನ್ನುವುದನ್ನು ಬಿಬಿಸಿಯು ದೃಢಪಡಿಸಿದೆ.

ಶಾಲೆಯೊಂದನ್ನು ಸುಟ್ಟು ಹಾಕಿದ್ದು, ಅಲ್ಲಿಗೆ ಭೇಟಿ ನೀಡಿದ್ದ ಬಿಬಿಸಿ ತಂಡವು ದಾಳಿಯ ಹಿಂದಿನ ಕಾರಣಗಳು ಧಾರ್ಮಿಕಕ್ಕಿಂತ ಹೆಚ್ಚಾಗಿ ರಾಜಕೀಯವಾಗಿರುವಂತಿದೆ ಎನ್ನುವುದನ್ನು ಕಂಡುಕೊಂಡಿದೆ.

ಈ ಎಲ್ಲ ಪೋಸ್ಟ್‌ಗಳನ್ನು ಹಲವಾರು ಖಾತೆಗಳಿಂದ ಹಂಚಿಕೊಳ್ಳಲಾಗಿದ್ದು,ಈ ಪೈಕಿ ಹೆಚ್ಚಿನವು ಹಿಂದೂ ರಾಷ್ಟ್ರವಾದಿ ಮೌಲ್ಯಗಳನ್ನು ಬೆಂಬಲಿಸುತ್ತಿವೆ.

ಮುಸ್ಲಿಮರು ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಪ್ಪಾಗಿ ಬಿಂಬಿಸಿರುವ ಈ ಪೋಸ್ಟ್‌ಗಳಲ್ಲಿ ಕೆಲವನ್ನು ಬಾಂಗ್ಲಾದೇಶ ಅಥವಾ ಭಾರತದಿಂದ ಬಹುದೂರದಲ್ಲಿರುವ ಖಾತೆಗಳಿಂದ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶದಲ್ಲಿಯ ಪರಿಶೀಲಿಸಲ್ಪಡದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಟಾಮಿ ರಾಬಿನ್ಸನ್, ಆ ದೇಶದಲ್ಲಿ 'ಹಿಂದೂಗಳ ನರಮೇಧ' ನಡೆಯುತ್ತಿದೆ ಎಂದು ಪೋಸ್ಟ್ ಗಳಲ್ಲಿ ಹೇಳಿದ್ದಾನೆ.

ರಾಬಿನ್ಸನ್ ಪೋಸ್ಟ್ ಮಾಡಿದ ವೀಡಿಯೊವೊಂದರ ತನಿಖೆಗಿಳಿದ ಬಿಬಿಸಿಗೆ ಕಂಡು ಬಂದಿದ್ದೇ ಬೇರೆ. ಬಹಳ ಹಿಂದೆಯೇ ಪ್ರಕರಣ ದಾಖಲಾಗಿದ್ದ ಭೂವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಮಹಿಳೆಯ ಮನೆಯ ಮೇಲೆ ದಾಳಿ ನಡೆದಿತ್ತು. ವಾಸ್ತವದಲ್ಲಿ ಗಲಭೆಗೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ. ಮಹಿಳೆ ತನ್ನ ಪತಿಯ ಪ್ರಾಣಕ್ಕಾಗಿ ದಾಳಿಕೋರರನ್ನು ಅಂಗಲಾಚುತ್ತಿರುವ ವೀಡಿಯೊವನ್ನು ರಾಬಿನ್ಸನ್ ಪೋಸ್ಟ್ ಮಾಡಿದ್ದು, ಅದನ್ನು ಮುಸ್ಲಿಮರ ದಾಳಿ ಎಂದು ಬಿಂಬಿಸಿದ್ದ

ಹಿಂದೂಗಳು ಅವಾಮಿ ಲೀಗ್‌ ಬೆಂಬಲಿಗರಾಗಿದ್ದು, ಅವರ ಒಡೆತನದ ಆಸ್ತಿಗಳ ಮೇಲೆ ದಾಳಿಗಳು ನಡೆದಿರುವುದು ನಿಜ. ಆದರೆ ಹೆಚ್ಚಿನವು ರಾಜಕೀಯ ಪ್ರೇರಿತವಾಗಿವೆ ಮತ್ತು ಬಲಪಂಥೀಯ ಖಾತೆಗಳು ಇವುಗಳಿಗೆ ಧಾರ್ಮಿಕ ಬಣ್ಣ ನೀಡಿ ವೀಡಿಯೊಗಳನ್ನು ಹರಡುತ್ತಿವೆ ಎಂದು ಬಾಂಗ್ಲಾದೇಶಕ್ಕಾಗಿ ಎಎಫ್‌ಪಿ ಫ್ಯಾಕ್ಟ್ ಚೆಕರ್ ಖಾದರುದ್ದೀನ್ ಶಿಶಿರ್ ಹೇಳಿದರು.

Read These Next

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರಾಜಿನಾಮೆ ನಿಡ್ತಾರಾ? ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ?

ಹೊಸದಿಲ್ಲಿ : ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ನಿಜವಾಗ್ಲೂ ...

ಕೇಜ್ರವಾಲ್‌ಗೆ ಜಾಮೀನು; ಬಂಧನದ ಕಾನೂನುಬದ್ಧತೆ ಬಗ್ಗೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ

ಅಭಿವೃದ್ಧಿ ಹೊಂದಿದ ಸಮಾಜಕ್ಕಾಗಿ ಸುಧಾರಿತ ನ್ಯಾಯವ್ಯವಸ್ಥೆಯೊಂದು ಯೊಂದು ಬೇಕು, ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳನ್ನು ...

“ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ” ಸೆ.13-22 ರಾಜ್ಯವ್ಯಾಪಿ “ಸೀರತ್’ ಅಭಿಯಾನ

ಬೆಂಗಳೂರು: ಪ್ರವಾದಿ ಮುಹಮ್ಮದ್ ಅವರ ಜನ್ಮ ತಿಂಗಳ ಪ್ರಯುಕ್ತ ಅವರ ಮಾನವೀಯ ಹಾಗೂ ಚಾರಿತ್ರ್ಯದ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿರುವ ...

ಹಮಾಸ್ ಉನ್ನತ ನಾಯಕನ ಹತ್ಯೆ

ಟೆಹ್ರಾನ್‌:‌ ಇರಾನ್‌ ರಾಜಧಾನಿ ಟೆಹ್ರಾನ್‌ ನಲ್ಲಿ ಬುಧವಾರ ನಡೆದ ದಾಳಿಯಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ...