ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗಾಗಿ ಜಿಲ್ಲಾಡಳಿತಕ್ಕೆ ಸಮಗ್ರ ಮಾರ್ಗಸೂಚಿಗಳು

Source: S O News | By I.G. Bhatkali | Published on 13th September 2024, 10:09 PM | State News |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಬೀದರ್‍ನಿಂದ ಚಾಮರಾಜನಗರದವೆರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಸೆಪ್ಟೆಂಬರ್ 9 ಹಾಗೂ ಸೆಪ್ಟೆಂಬರ್ 11 ರಂದು ಸುತ್ತೋಲೆ ಹೊರಡಿಸಲಾಗಿದೆ.

ಸಾಮಾನ್ಯ ಮಾರ್ಗಸೂಚಿಗಳು:
1.ಜಿಲ್ಲಾ ಸಲಹಾ ಸಮಿತಿ: ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಥವಾ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿ, ಮಾನವ ಸರಪಳಿ ನಿರ್ಮಾಣದ ಕುರಿತಂತೆ ಮಾರ್ಗದರ್ಶನದಂತಹ ಪ್ರಮುಖ ವಿಚಾರಗಳನ್ನು ಅಂತಿಮಗೊಳಿಸುವುದು. ಜಿಲ್ಲೆಯ ಲೋಕಸಭಾ ಸದಸ್ಯರು/ ರಾಜ್ಯಸಭಾ ಸದಸ್ಯರು /ವಿಧಾನಸಭಾ /ವಿಧಾನ ಪರಿಷತ್ತಿನ ಸದಸ್ಯರುಗಳು /ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸಹ ಸದರಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕ್ರಮ ಜರಗಿಸತಕ್ಕದ್ದು.

2. ಸಮಿತಿಯಲ್ಲಿ ಭಾಗವಹಿಸುವಿಕೆ: ಸಮಿತಿಯಲ್ಲಿ ಸರ್ಕಾರೇತರ ಸಂಸ್ಥೆಗಳು (ಎನ್‍ಜಿಒ), ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‍ಯು), ಖಾಸಗಿ ವಲಯ, ನಾಗರೀಕ ಸಮಾಜ ಮತ್ತು ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳನ್ನು ಒಳಗೊಂಡಿರಬೇಕು.

3. ಮಾನವ ಸರಪಳಿ ಮಾರ್ಗ: ಜಿಲ್ಲೆಯಲ್ಲಿನ ಮಾನವ ಸರಪಳಿ ಮಾರ್ಗವು ಜಿಲ್ಲಾ ಕೇಂದ್ರವನ್ನು ಒಳಗೊಂಡಿರಬಹುದು ಅಥವಾ ಒಳಗೊಂಡಿಲ್ಲದಿದ್ದರೆ ಮಾನವ ಸರಪಳಿ ಹಾದುಹೋಗುವ ಗ್ರಾಮ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಿಲ್ಲಾಡಳಿತವು ಕಾರ್ಯನಿರ್ವಹಿಸತಕ್ಕದ್ದು.

4. ಅನುದಾನ ಬಿಡುಗಡೆ: ಪ್ರತಿ ಜಿಲ್ಲೆಗೆ ಮಾನವ ಸರಪಳಿ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗುವುದು. ಜಿಲ್ಲಾಡಳಿತವು ಆ ಅನುದಾನವನ್ನು ಈ ಕಾರ್ಯಕ್ರಮದ ಯಾವುದೇ ಉದ್ದೇಶಕ್ಕಾಗಿ ಬಳಸಲು ಸ್ವತಂತ್ರವಾಗಿರುತ್ತದೆ. ಇದಲ್ಲದೆ ಜಿಲ್ಲಾಡಳಿತವು ತಮ್ಮಲ್ಲಿ ಲಭ್ಯವಿರುವ ಅನುದಾನವನ್ನು ಹಾಗೂ ನಗರ ಸ್ಥಳೀಯ ಸಂಸ್ಥೆ / ಜಿಲ್ಲಾ ಪಂಚಾಯತಿ/ತಾಲೂಕು ಪಂಚಾಯಿತಿ/ಗ್ರಾಮ ಪಂಚಾಯಿತಿ ಮುಂತಾದ ಇನ್ನಿತರ ಸಂಸ್ಥೆಗಳ ಬಳಿ ಲಭ್ಯವಿರುವ ಅನುದಾನವನ್ನು ಸಹ ಈ ಕಾರ್ಯಕ್ರಮಕ್ಕೆ ಬಳಸಬಹುದು.

5. ಅಧಿಕಾರಿಗಳ ನೇಮಕ: ಜಿಲ್ಲಾಧಿಕಾರಿಗಳು ತನ್ನ ಅಧೀನದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳನ್ನು ವಿಭಾಗ ಅಧಿಕಾರಿ, ಪ್ರದೇಶ ಅಧಿಕಾರಿ, ಮತ್ತು ತಾಲೂಕು ಅಧಿಕಾರಿಗಳಾಗಿ ನೇಮಿಸುವುದು. ಪ್ರತಿ 100 ಮೀಟರ್‍ಗೆ ಒಬ್ಬರಂತೆ - ವಿಭಾಗ ಅಧಿಕಾರಿ, ಪ್ರತಿ 1 ಕಿಮೀ ಗೆ ಒಬ್ಬರಂತೆ - ಪ್ರದೇಶ ಅಧಿಕಾರಿ, ಪ್ರತಿ 3-5 ಕಿಮೀ ಗೆ ಒಬ್ಬರಂತೆ - ತಾಲ್ಲೂಕು ಅಧಿಕಾರಿ, ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಲು ಸಾಕಷ್ಟು ಪೆÇಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು.

6. ಸುರಕ್ಷತೆ:  ಮಾನವ ಸರಪಳಿಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಲು ಸಾಕಷ್ಟು ಪೆÇಲೀಸ್  (ವಿಶೇಷವಾಗಿ ಹೆದ್ದಾರಿಗಳಲ್ಲಿ ಕನಿಷ್ಟ ಪ್ರತಿ 50 ಮೀಟರ್ ಒಬ್ಬ ಪೇದೆಯಂತೆ) ಸಿಬ್ಬಂದಿಯನ್ನು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಪಡೆಯುವುದು.

7. ಧನಸಹಾಯ, ಪ್ರಾಯೋಜಕತ್ವ ಮತ್ತು ಪಾಲ್ಗೊಳ್ಳುವಿಕೆ: ಸದರಿ ದಿನಾಚರಣೆಯು ಜನಸಾಮಾನ್ಯರಿಗೆ ಒತ್ತು ನೀಡುವ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ನಾಗರೀಕ ಸಮಾಜ ಮತ್ತು ಖಾಸಗಿ ವಲಯದಿಂದ ಧನಸಹಾಯ, ಪ್ರಾಯೋಜಕತ್ವ ಮತ್ತು ಪಾಲ್ಗೊಳ್ಳುವಿಕೆಯನ್ನು ಪೆÇ್ರೀತ್ಸಾಹಿಸುವುದು.

8. ಶಾಲೆ, ಕಾಲೇಜುಗಳು ಮತ್ತು ಇತರೆ ಸಂಸ್ಥೆಗಳ ಭಾಗವಹಿಸುವಿಕೆ: ಶಾಲೆ, ಕಾಲೇಜುಗಳು ಮತ್ತು ಭಾಗವಹಿಸುವ ಸಂಘ-ಸಂಸ್ಥೆಗಳು ಬ್ಯಾನರ್‍ಗಳು ಮತ್ತು ಧ್ವಜಗಳನ್ನು ಪ್ರದರ್ಶಿಸಬಹುದು ಮತ್ತು ಹಬ್ಬದ ವಾತಾವರಣದಂತೆ ಆಚರಿಸಲು ಪೆÇ್ರೀತ್ಸಾಹಿಸುವುದು. ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳನ್ನು ಕಡ್ಡಾಯವಾಗಿ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಇತರೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕ್ರಮವಹಿಸುವುದು.

9. ಪ್ರಮಾಣಪತ್ರಕ್ಕಾಗಿ ಅರ್ಹತೆ: ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯು ಪ್ರಮಾಣಪತ್ರಕ್ಕೆ ಅರ್ಹರಿರುತ್ತಾರೆ. ಯಾವುದೇ ವ್ಯಕ್ತಿಯು ತನ್ನ ಫೆÇೀಟೊವನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲು ಬಯಸಿದರೆ, ತಾನು ಮಾನವ ಸರಪಳಿಯಲ್ಲಿ ಪಾಲ್ಗೊಂಡಿರುವ ಫೆÇೀಟೊ ತೆಗೆದು ಅಪ್‍ಲೋಡ್ ಮಾಡಬೇಕು. ಒಂದು ಫೆÇೀಟೊದಲ್ಲಿ ಗರಿಷ್ಠ ಐದು ಜನರಿಗೆ ಮಾತ್ರವೇ ಅವಕಾಶವಿದ್ದು, ಐದು ಜನರೂ ಒಂದೇ ಫೆÇೀಟೋವನ್ನು ಅಪ್‍ಲೋಡ್ ಮಾಡಬಹುದು. ಆ 5 ಜನರಲ್ಲಿ ಪ್ರತಿಯೊಬ್ಬರೂ ಒಂದೇ ಫೆÇೀಟೊ ಇರುವ ಪ್ರತ್ಯೇಕ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಫೆÇೀಟೊ ಅಪ್ ಲೋಡ್ ಮಾಡಲಿಚ್ಛಿಸದವರು, ತಮ್ಮ ಮೂಲಭೂತ ವಿವರಗಳನ್ನು ಮಾತ್ರ ಅಪ್ ಲೋಡ್ ಮಾಡಬೇಕು, ಈ ವಿವರಗಳನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲಾಗುವುದು. ಪ್ರಮಾಣಪತ್ರವನ್ನು ಪಡೆಯಲು ಇಚ್ಛಿಸದಿದ್ದರೆ, ಯಾವುದೇ ವಿವರಗಳನ್ನು ಅಪ್ ಲೋಡ್ ಮಾಡಬೇಕಾಗಿಲ್ಲ. ಈ ವರ್ಷದ ಸಂವಿಧಾನ ದಿನ ಅಂದರೆ 26ನೇ ನವೆಂಬರ್ 2024 ರಂದು, ಮಾನವ ಸರಪಳಿಯಲ್ಲಿ ಭಾಗವಹಿಸಿ ತಮ್ಮ ಮಾಹಿತಿಯನ್ನು ಸಲ್ಲಿಸಿದ ಪ್ರತಿಯೊಬ್ಬರು ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಮಾನವ ಸರಪಳಿಯಲ್ಲಿ ಭಾಗವಹಿಸುವವರು ತಮ್ಮ ಮಾಹಿತಿಯನ್ನು https://democracydaykarnataka.in/ ವೆಬ್‍ಸೈಟ್ ಗೆ ಸಲ್ಲಿಸಬಹುದು.

10. ಪೂರ್ವ ನೋಂದಣಿ: ಮಾನವ ಸರಪಳಿಯಲ್ಲಿ ಭಾಗವಹಿಸಲು ಪೂರ್ವ ನೋಂದಣಿ ಅವಶ್ಯಕವಿಲ್ಲದಿದ್ದರೂ, ಪೆÇ್ರೀತ್ಸಾಹಿಸಲಾಗಿದೆ. ಸೆಪ್ಟೆಂಬರ್ 25 ರೊಳಗೆ ತಮ್ಮ ವಿವರಗಳನ್ನು ಮತ್ತು ಭಾಗವಹಿಸುವಿಕೆಯ ಪುರಾವೆಯನ್ನು ವೆಬ್‍ಸೈಟ್‍ನಲ್ಲಿ ದಾಖಲಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ.

ಪ್ರಚಾರ ಕಾರ್ಯಗಳ ಕುರಿತ ಮಾರ್ಗ ಸೂಚಿಗಳು :
1. ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಧ್ಯಮ ಪ್ರಕಟಣೆ ಹೊರಡಿಸಿ, ಸಮಾಜದ ನಾಲ್ಕನೇ ಸ್ಥಂಭವಾದ ಮಾಧ್ಯಮದವರನ್ನು ಸಂಪೂರ್ಣವಾಗಿ ಕಾರ್ಯಕ್ರಮದ ಪ್ರಚಾರಕ್ಕೆ ತೊಡಗಿಸಿಕೊಳ್ಳುವುದು

2. ಪ್ರತಿ ಜಿಲ್ಲೆಯ ಮಾನವ ಸರಪಳಿ ಮಾರ್ಗದಲ್ಲಿ ಸೆಪ್ಟೆಂಬರ್ 10 ರಿಂದ 14 ರವರೆಗೆ ಕನಿಷ್ಠ 05 ಸರ್ಕಾರಿ ವಾಹನಗಳಲ್ಲಿ ಬ್ಯಾನರ್ ಬಳಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಕುರಿತು ಪ್ರಚಾರ ಕೈಗೊಳ್ಳುವುದು

3. ಸೆಪ್ಟೆಂಬರ್ 12 ರಿಂದ 14 ರವರೆಗೆ ಮಾನವ ಸರಪಳಿ ನಿರ್ಮಿಸುವ ಮಾರ್ಗದಲ್ಲಿ ಬೆಳಗ್ಗೆ 09.00 ರಿಂದ 10.30 ರವರೆಗೆ ಸರ್ಕಾರಿ ವಾಹನಗಳಲ್ಲಿ ಬ್ಯಾನರ್, ಕರಪತ್ರ, ಧ್ವಜ, ಪ್ರಜಾ ಪ್ರಭುತ್ವ ದಿನಾಚರಣೆಯ ಲೋಗೋಗಳನ್ನು ಬಳಸಿ ಹಾಗು ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಪೂರ್ವಾಭ್ಯಾಸ ಮಾಡುವುದರ ಮೂಲಕ ಕಾರ್ಯಕ್ರಮದ ಪ್ರಚಾರ ಕೈಗೊಳ್ಳುವುದು.

4. ಜಿಲ್ಲೆಯ ಸ್ಥಳೀಯ ಕಲಾವಿದರಿಂದ ಕನಿಷ್ಠ 100 ಆಡಿಯೋ, ವಿಡಿಯೋ ಹಾಗು ಸ್ಥಿರಚಿತ್ರದ ತುಣುಕುಗಳನ್ನು ಸಿದ್ಧಪಡಿಸಿ ಸಾಮಾಜಿಕ ಮಾಧ್ಯಮದ ಮುಖಾಂತರ ವ್ಯಾಪಕ ಪ್ರಚಾರ ಕೈಗೊಳ್ಳುವುದು.

5. ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ಎಲ್ಲಾ ಮಾಧ್ಯಮ ಪ್ರತಿನಿಧಿಗಳ ಸಭೆ ಕರೆದು ಮಾನವ ಸರಪಳಿಯ ಮಾರ್ಗ ಮತ್ತು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಚಾರ ಮಾಡಲು ಕ್ರಮ ಕೈಗೊಳ್ಳುವುದು.

6. ಸಾಮಾಜಿಕ ಮಾದ್ಯಮದ ಮೂಲಕ ಸದರಿ ಕಾರ್ಯಕ್ರಮದ ಬಗ್ಗೆ, ಜನಸಾಮಾನ್ಯರಿಗೆ ಅರಿವು ಮೂಡಿಸಿ, ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸಾಮಾಜಿಕ ಜಾಲತಾಣ ಸ್ವಯಂ ಸೇವಕರ ತಂಡವನ್ನು ನೇಮಿಸಲು ಕ್ರಮ ಕೈಗೊಳ್ಳುವುದು.
7. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯ ಗೌರವಾನ್ವಿತ ವ್ಯಕ್ತಿಗಳಿಂದ ಪ್ರಜಾಪ್ರಭುತ್ವ ದಿನದಲ್ಲಿ ಪಾಲ್ಗೊಳ್ಳುವಂತೆ ಅತ್ಯಂತ ಕ್ರಿಯಾತ್ಮಕವಾಗಿ ಸಾಮಾಜಿಕ ಮಾಧ್ಯಮಗಳ ಮುಖಾಂತರ ಮನವಿ ಮಾಡುವುದು.

8. ಜಿಲ್ಲೆಯ ಸುಪ್ರಸಿದ್ಧ ವ್ಯಕ್ತಿಗಳನ್ನು ಸಂಪರ್ಕಿಸಿ ಈ ಕಾರ್ಯಕ್ರಮದ ಬಗ್ಗೆ ಮಾತನಾಡಲು, ಅಂಕಣಗಳನ್ನು ಬರೆಯಲು ಪೆÇ್ರೀತ್ಸಾಹಿಸುವುದು ಮತ್ತು ಅವರನ್ನು ಕಾರ್ಯಕ್ರಮದ ಯಶಸ್ಸಿಗಾಗಿ ತೊಡಗಿಸಿಕೊಳ್ಳುವುದು.

9. ಸೆಪ್ಟೆಂಬರ್ 12 ರಿಂದ 14 ರವರೆಗೆ ಜಿಲ್ಲಾಡಳಿತವು ಸಂಜೆ 6 ಗಂಟೆಯಿಂದ  9 ಗಂಟೆಯವರೆಗೆ ಟ್ವಿಟರ್ (X) ನಲ್ಲಿ #Karnataka_Democracy_Day2024 ಬಳಸಿ ಸದರಿ ಕಾರ್ಯಕ್ರಮದ ಕುರಿತು ಕನಿಷ್ಠ 180 ಟ್ವಿಟ್‍ಗಳನ್ನು ಮಾಡಿ ಟ್ವಿಟರ್ ಸ್ಟಾರ್ಮ್ ಸೃಷ್ಟಿಸುವುದು.

10. ಕಾರ್ಯಕ್ರಮದ ಧ್ವಜ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ವಜವು ಕಡ್ಡಾಯವಾಗಿ ಕಾರ್ಯಕ್ರಮದ ಅಧಿಕೃತ ಲಾಂಛನದೊಂದಿಗೆ (ಲೋಗೋ) ಆಕಾಶ ನೀಲಿ  (official event logo with skyblue color background, width-to-height ratio of 3:2)ಮುದ್ರಿಸಬೇಕು.

11. ಈ ಕಾರ್ಯಕ್ರಮದ ಆಯೋಜನೆಯನ್ನು ಸೆರೆಹಿಡಿಯಲು ಡ್ರೋಣ್ ಬಳಸಲು ಉತ್ತೇಜಿಸಲಾಗಿದೆ ಹಾಗೂ ಇದರ ಕುರಿತು ಮಾಹಿತಿಗಾಗಿ, ಐಟಿಬಿಟಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಅಶ್ವಿನ್ ಮೊ.ಸಂ.9480002970 ಇವರನ್ನು ಸಂಪರ್ಕಿಸಬಹುದು.

ಕಾರ್ಯಕ್ರಮದ ಪ್ರಶಸ್ತಿಗಳು:
1. ಈ ವರ್ಷ ನವೆಂಬರ್ 26 ರಂದು ರಾಜ್ಯ ಮಟ್ಟದ ಸಮಾರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮೂರು ಜಿಲ್ಲೆಗಳನ್ನು ಗುರುತಿಸಿ  ಮಾನವ ಸರಪಳಿ ರೂಪಿಸುವಲ್ಲಿ ನಾವೀನ್ಯತೆ, ಅತಿ ಹೆಚ್ಚು ಗಿಡಗಳನ್ನು ನೆಡುವುದು,  ಅತಿ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಪಾಲ್ಗೊಳ್ಳುವಿಕೆ,  ಅತಿ ಹೆಚ್ಚು ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಮತ್ತು ಅತ್ಯಂತ ಉದ್ದದ ಮಾನವ ಸರಪಳಿ (ಜಿಲ್ಲಾ ಜನಸಂಖ್ಯೆವಾರು) ಒಳಗೊಂಡ 5 ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಪ್ರತಿ ವಿಭಾಗದಲ್ಲಿ ತಲಾ ತಲಾ ಮೂರು ಪ್ರಶಸ್ತಿಗಳಂತೆ ಒಟ್ಟು 15 ಪ್ರಶಸ್ತಿಗಳನ್ನು ನೀಡಲಾಗುವುದು.

ಸೆಪ್ಟೆಂಬರ್ 15ರ  ಸಮಾರಂಭದ ದಿನದಂದು  ಬೆಳಿಗ್ಗೆ 9.30 ರಿಂದ 9:37 ವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು, ಬೆಳಿಗ್ಗೆ  09:37 ರಿಂದ 09:40 ರವರೆಗೆ ನಾಡಗೀತೆ, 09:40 ರಿಂದ 09:55 ರವರೆಗೆ ಮುಖ್ಯ ಅತಿಥಿಗಳಿಂದ ಭಾಷಣ 09:55 ರಿಂದ 09:57 ರವರೆಗೆ  ಸಂವಿಧಾನ ಪ್ರಸ್ತಾವನೆ ಓದುವುದು. 9.57 ರಿಂದ 9:59 ರವರೆಗೆ ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುವುದು. ಡ್ರೋಣ್ ಮುಖಾಂತರ ವಿಡಿಯೋ ಚಿತ್ರೀಕರಣ ಮಾಡುವುದು. ಮತ್ತು ಬೆಳಿಗ್ಗೆ 10 ಗಂಟೆಯಿಂದ ಮಾನವ ಸರಪಳಿಯಲ್ಲಿಯೇ ತಮ್ಮ 2 ಕೈಗಳನ್ನು ಮೇಲೆತ್ತಿ 'ಜೈ ಹಿಂದ್, ಜೈ ಕರ್ನಾಟಕ" ಘೋಷಣೆ ಕೂಗಿ ಸರಪಳಿಯನ್ನು ಕಳಚುವುದು. ಆಂಡ್ರಾಯ್ಡ್ ಅಥವಾ ಐಫೋನ್ ಮೊಬೈಲ್‍ನಲ್ಲಿ ತೋರಿಸುವ ಐಎಸ್‍ಟಿ ಸಮಯವನ್ನು ಕಡ್ಡಾಯವಾಗಿ ಪಾಲಿಸುವುದು. ರಿಲೆ ನಡೆಸಲು ಅನುಮತಿ ನೀಡಿದ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗ ಸೂಚಿಗಳನ್ನು ಹೊರಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಮೇಜರ್ ಮಣಿವಣ್ಣನ್. ಪಿ ಅವರು ಸುತ್ತೋಲೆ ತಿಳಿಸಿದ್ದಾರೆ.

Read These Next

ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಸವರ್ಣೀಯರಿಂದ ಹಲ್ಲೆ;21 ಮಂದಿಯ ಬಂಧನ

ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ...

ವಿಶ್ವದಾಖಲೆಯ ಪ್ರಜಾಪ್ರಭುತ್ವದ ಸರಪಳಿ; 2,500 ಕಿ.ಮೀ. ವ್ಯಾಪ್ತಿಯಲ್ಲಿ ಮಾನವ ಸರಪಳಿ ಯಶಸ್ವಿ; ಸಿಎಂ, ಸಚಿವರು, ಶಾಸಕರು ಸಹಿತ 31 ಜಿಲ್ಲೆಗಳಿಂದ ಲಕ್ಷಾಂತರ ನಾಗರಿಕರು, ವಿದ್ಯಾರ್ಥಿ-ಯುವಜನರು ಭಾಗಿ

ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯು ಹಮ್ಮಿಕೊಂಡಿದ್ದ ಮಾನವ ಸರಪಳಿ ...

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ

ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯನ್ನು ಅಳವಡಿಸಿ, ಖಾಸಗಿ ವೀಡಿಯೋಗಳನ್ನು ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಪ್ರಸಾರ ...