ಉತ್ತರಾಖಂಡ: ಕಮರಿಗೆ ಉರುಳಿದ ಬಸ್ 36 ಸಾವು, 27 ಮಂದಿಗೆ ಗಾಯ

Source: Vb | By I.G. Bhatkali | Published on 5th November 2024, 12:57 AM | National News |

ಡೆಹ್ರಾಡೂನ್: ಉತ್ತರಾಖಂಡದ ಸಲ್ ತಹಶೀಲ್‌ನ ಮರ್ಚುಲಾ ಪ್ರದೇಶದ ಕೂಪಿ ಗ್ರಾಮದ ಸಮೀಪ ಸೋಮವಾರ ಬೆಳಗ್ಗೆ ಖಾಸಗಿ ಬನ್ನೊಂದು ಕಮರಿಗೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 36 ಮಂದಿ ಸಾವನಪ್ಪಿದ್ದಾರೆ ಹಾಗೂ 27 ಮಂದಿ ಗಾಯಗೊಂಡಿದ್ದಾರೆ. 

ಗಾಯಗೊಂಡವರಲ್ಲಿ ನಾಲ್ಕರ ಸ್ಥಿತಿ ಚಿಂತಾಜನಕವಾಗಿದ್ದು, ಅವರಲ್ಲಿ ಮೂವರನ್ನು ಏರ್‌ಲಿಫ್ಟ್ ಮಾಡಿ ಋಷಿಕೇಶ್‌ ನಲ್ಲಿರುವ ಏಮ್ಸ್‌ ಗೆ ದಾಖಲಿಸಲಾಗಿದೆ. ಇನ್ನೊಬ್ಬರನ್ನು ಹಾನಿಯಲ್ಲಿರುವ ಸುಶೀಲಾ ತಿವಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲೋರಾ ಜಿಲ್ಲೆಯ ವಿಪತ್ತು ನಿರ್ವಹಣಾ ಅಧಿಕಾರಿ ವಿನೀತ್ ಪಾಲ್ ತಿಳಿಸಿದ್ದಾರೆ. 

ಅಪಘಾತ ಸಂಭವಿಸುವ ಸಂದರ್ಭ 43 ಸೀಟುಗಳ ಈ ಬಸ್‌ನಲ್ಲಿ ಸುಮಾರು 60 ಮಂದಿ ಇದ್ದರು. ಬಸ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಪ್ರಯಾಣಿಸಿರುವುದು ಅಪಘಾತಕ್ಕೆ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.

ಗರ್ವಾಲ್ ಮೋಟರ್ ಮಾಲಕರ ಸಂಘ ನಿರ್ವಹಿಸುತ್ತಿರುವ ಈ ಬಸ್ ಗರ್ವಾಲ್ ವಲಯದ ಪುರಿಯಿಂದ ಕುಮಾನ್‌ನ ರಾಮನಗರಕ್ಕೆ ತೆರಳುತ್ತಿತ್ತು. ಅಪಘಾತ ಬೆಳಗ್ಗೆ ಸುಮಾರು 8 ಗಂಟೆಗೆ ಸಂಭವಿಸಿತು ಎಂದು ಜಿಲ್ಲಾಧಿಕಾರಿ ಅಲೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ. 

ರಾಮನಗರ ತಲುಪುವುದಕ್ಕಿಂತ 35 ಕಿ.ಮೀ. ಹಿಂದೆ ಅಲ್ಲೋರಾದ ಮರ್ಚುಲಾ ಪ್ರದೇಶದಲ್ಲಿರುವ 200 ಮೀಟರ್ ಆಳದ ಕಮರಿಗೆ ಬಸು ಉರುಳಿತು ಹಾಗೂ ತೊರೆಯ ಸಮೀಪದಲ್ಲಿ ನಿಂತಿತು ಎಂದು ಅವರು ತಿಳಿಸಿದ್ದಾರೆ. ಪೊಲೀಸರು, ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಅವರು ಹೇಳಿದ್ದಾರೆ. 

ಈ ಅಪಘಾತದ ಹಿನ್ನೆಲೆಯಲ್ಲಿ ಪುರಿ ಹಾಗೂ ಅಲ್ಲೋರಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಹಾಗೂ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

Read These Next

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...