ಧೂಮಪಾನ ಮಾಡುವವರಿಗಿಂತ ಧೂಮಪಾನ ಮಾಡುವವರು ಬಿಡುವ ಹೊಗೆಯನ್ನು ಸೇವಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಅದರ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಸಂಶೋಧನೆಗಳಿAದ ತಿಳಿದುಬಂದಿರುವ ಸಂಗತಿ. ಇದನ್ನು ತಪ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಜಾರಿಗೊಳಿಸಿದ್ದರೂ ಸಹ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ನಿಂತಿಲ್ಲ..
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ತಡೆಯಲು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಕೋಶವು ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಶನ್ “ಸ್ಟಾಪ್ ಟೊಬ್ಯಾಕೋ” ಅನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಧೂಮಪಾನ ಮಾಡುವುದು ಕಂಡುಬAದರೆ, ಅದನ್ನು ಉಲ್ಲಂಘಿಸುವವರ ಛಾಯಾಚಿತ್ರವನ್ನು ತೆಗೆದುಕೊಂಡು ಅದನ್ನು ಈ ಅಪ್ಲಿಕೇಶನ್ನಲ್ಲಿ ಅಪ್ಲೋಡ್ ಮಾಡಿದಲ್ಲಿ, ತಂಬಾಕು ನಿಯಂತ್ರಣ ಕೋಶದ ತಂಡವು ಸ್ಥಳಕ್ಕೆ ಧಾವಿಸಿ, ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತದೆ.
ಸಾರ್ವಜನಿಕರು ತಮ್ಮ ಮೊಬೈಲ್ನ ಪ್ಲೇ ಸ್ಟೋರ್ ನಲ್ಲಿ Stoptobacco ಎಂದು ಟೈಪ್ ಮಾಡಿ, ಆಪ್ ನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆಪ್ ನಲ್ಲಿ ಕಾಣಿಸುವ ರಿಜಿಸ್ಟರ್ ಕಂಪ್ಲೆöÊAಟ್ ಎಂಬುದನ್ನು ಒತ್ತಿ, ಧೂಮಪಾನ ಮಾಡುತ್ತಿರುವ ವ್ಯಕ್ತಿಗಳು ಇರುವ ಸ್ಥಳದ ಫೋಟೋ ತೆಗೆದು, ತಮ್ಮ ಹೆಸರು, ಜಿಲ್ಲೆ ಮತ್ತು ಡ್ರಾಪ್ ಬಾಕ್ಸ್ ನಲ್ಲಿರುವ ಯಾವ ರೀತಿಯ ದೂರು ಎಂಬುದನ್ನು ಆಯ್ಕೆ ಮಾಡಿಕೊಂಡು, ಧೂಮಪಾನ ಮಾಡುತ್ತಿರುವ ಸ್ಥಳದ ವಿಳಾಸ, ತಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಥಳದ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.
ಸಾರ್ವಜನಿಕರು ಸಲ್ಲಿಸಿದ ಈ ದೂರು, ಆ ಜಿಲ್ಲೆಯ ತಂಬಾಕು ನಿಯಂತ್ರ‍್ರಣ ಅಧಿಕಾರಿಯ ಮೊಬೈಲ್ ನಲ್ಲಿನ ಆಪ್ ಗೆ ರವಾನೆಯಾಗಲಿದ್ದು, ಅವರು ಆ ಸ್ಥಳದಲ್ಲಿನ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಯ ಮೊಬೈಲ್ ಗೆ ಆಪ್ ಮೂಲಕವೇ ಸದ್ರಿ ದೂರನ್ನು ಕಳುಹಿಸಿ, ಪರಿಶೀಲನೆ ಮಾಡಲು ಸೂಚಿಸಲಿದ್ದಾರೆ. ದೂರಿನ ಪರಿಶೀಲನೆಗೆ ಆಗಮಿಸುವ ತಂಡ ಸಂಬAಧಪಟ್ಟ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳು ಧೂಮಪಾನ ಮಾಡುತ್ತಿರುವುದು ಕಂಡು ಬಂದಲ್ಲಿ ಸಂಬAಧಪಟ್ಟ ವ್ಯಕ್ತಿಯಿಂದ ಮತ್ತು ಆ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶ ಮಾಡಿಕೊಟ್ಟ ಸಂಬAಧಪಟ್ಟ ಅಂಗಡಿಯ ಮಾಲೀಕನಿಂದಲೂ ನಿಗಧಿತ ದಂಡ ವಸೂಲಿ ಮಾಡಲಿದ್ದಾರೆ.
ಆಪ್ ಮೂಲಕ ನಡೆಯುವ ಈ ಎಲ್ಲಾ ಚಟುವಟಿಕೆಗಳ ಮಾಹಿತಿಯು ಜಿಲ್ಲಾ ಮಟ್ಟದಲ್ಲಿರುವ ಅಧಿಕಾರಿಗಳು ಮತ್ತು ಬೆಂಗಳೂರಿನಲ್ಲಿರುವ ಅಧಿಕಾರಿಗಳ ಮೊಬೈಲ್ ನಲ್ಲಿರುವ ಆಪ್ ಗೆ ಸಹ ರವಾನೆಯಾಗಲಿದ್ದು, ದೂರಿನ ಆರಂಭದಿAದ ಮುಕ್ತಾಯದವರೆಗಿನ ಪ್ರತೀ ಹಂತದ ವಿವರಗಳನ್ನು ಸಂಬAಧಪಟ್ಟ ಎಲ್ಲಾ ಅಧಿಕಾರಿಗಳು ಆಪ್ ನಲ್ಲಿಯೇ ದಾಖಲಿಸಬೇಕಿದೆ. ಪ್ರಕರಣ ಮುಕ್ತಾಯವಾದಲ್ಲಿ ಈ ಬಗ್ಗೆ ದೂರುದಾರರಿಗೆ ಸಹ ಮಾಹಿತಿ ರವಾನೆಯಾಗಲಿದೆ.
ಈ ಆಪ್ ದೂರು ನೀಡಲು ಮಾತ್ರ ಬಳಕೆಯಾಗದೇ, ಕೋಪ್ಟಾ ಕಾಯ್ದೆಯ ನಿಯಮಗಳು, ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮತ್ತು ಬಳಕೆಯ ನಿಷೇಧ ಕುರಿತು ಚಿತ್ರಗಳ ಮಾಹಿತಿಯನ್ನೂ ಸಹ ನೀಡಲಿದೆ. Stoptobacco ಆಪ್ನ್ನು ಡೌನ್ ಲೋಡ್ ಮಾಡಿಕೊಳ್ಳಲು ಕ್ಯೂ.ಆರ್ ಕೋಡ್ ಕೂಡಾ ಇದ್ದು, ಸಾರ್ವಜನಿಕರ ಇದರ ಸೌಲಭ್ಯವನ್ನೂ ಸಹ ಪಡೆಯಬಹುದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಶಿಕ್ಷಣ ಸಂಸ್ಥೆಗಳ 100 ಮೀ ವ್ಯಾಪ್ತಿಯಲ್ಲಿ ತಂಬಾಕು ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದರೂ ಸಹ ಇದನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡು ಬರುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಸರ್ಕಾರ ರೂಪಿಸಿರುವ Stoptobacco ಆಪ್ ಮೂಲಕ ದೂರು ನೀಡಬಹುದಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿರುವ ವ್ಯಕ್ತಿಯಿಂದ ಮತ್ತು ಆ ಸ್ಥಳದಲ್ಲಿ ಧೂಮಪಾನ ಮಾಡಲು ಅವಕಾಶ ನೀಡಿದ ಸಂಬAಧಪಟ್ಟ ಅಂಗಡಿಯ ಮಾಲೀಕನಿಂದಲೂ ದಂಡ ವಸೂಲಿ ಮಾಡಲಾಗುವುದು.-
ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ.