ಜೀವಂತ ಬದುಕಿನ ಶ್ರೇಷ್ಠ ಉದಾಹರಣೆ ಪ್ರವಾದಿ ಮುಹಮ್ಮದ್(ಸ)

Source: SOnews | By Staff Correspondent | Published on 15th September 2024, 10:09 PM | National News | Special Report | Islam |

ಪ್ರವಾದಿ ಜನ್ಮದಿನ ಒಂದು ಅವಲೋಕನ

  • ಎಂ.ಆರ್.ಮಾನ್ವಿ

ಈದ್ ಮಿಲಾದುನ್ನಬಿ, ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನಾಚರಣೆಯು ಪ್ರತಿ ವರ್ಷದಂತೆ ಈ ಬಾರಿ ಸೆಪ್ಟೆಂಬರ್ ೧೬ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಪ್ರವಾದಿ (ಸ) ಅವರ ಜೀವನದ ಪಾಠಗಳು ಮತ್ತು ಸಂದೇಶಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಎಂಬ ವಿಚಾರದಲ್ಲಿ ಆಲೋಚನೆ ಮತ್ತು ಆತ್ಮವಿಮರ್ಶೆ ಅಗತ್ಯವಾಗಿದೆ. ಪ್ರವಾದಿ (ಸ) ಅವರ ಸಂದೇಶಗಳ ಸಾರವನ್ನು ಅರ್ಥ ಮಾಡಿಕೊಳ್ಳದೇ, ಅವರ ಜೀವನದ ಮೌಲ್ಯಗಳನ್ನು ಅಳವಡಿಸದೇ ಕೇವಲ ಆಚರಣೆಗಳ ಮೂಲಕ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯ ಪ್ರಶ್ನೆಯಾಗಬೇಕು.

ಮದ್ಯಪಾನದ ನಿಷೇಧವು ಇಸ್ಲಾಮಿನಲ್ಲಿಯೇ ಮಹತ್ವದ ಒಂದು ತಿರುವು. ಪ್ರವಾದಿ ಮುಹಮ್ಮದ್ (ಸ) ಅವರ ಅನುಯಾಯಿಗಳು ಅದನ್ನು ಅನುಸರಿಸಿದ ರೀತಿಯು ಇಂದಿನ ಸಮಾಜಕ್ಕೆ ದೊಡ್ಡ ಪಾಠವಾಗಬೇಕು. “ಓ ಸತ್ಯವಿಶ್ವಾಸಿಗಳೇ, ಮದ್ಯ, ಜೂಜು, 'ಬಲಿ ಪೀಠಗಳು' ಮತ್ತು 'ದಾಳ ಹಾಕುವುದು' ಇವೆಲ್ಲ ಹೊಲಸು ಪೈಶಾಚಿಕ ಕೃತ್ಯಗಳಾಗಿವೆ. ಅವುಗಳನ್ನು ವರ್ಜಿಸಿರಿ, ನಿಮಗೆ ಯಶಸ್ಸು ಲಭಿಸುವುದೆಂದು ನಿರೀಕ್ಷಿಸಬಹುದು.” (ಅಲ್ ಮಾಇದಃ 90)

“ಶೈತಾನನು ಮದ್ಯ ಮತ್ತು ಜೂಜಿನ ಮೂಲಕ ನಿಮ್ಮೊಳಗೆ ವೈರತ್ವ ಮತ್ತು ದ್ವೇಷವನ್ನುಂಟು ಮಾಡಲಿಕ್ಕೂ ನಿಮ್ಮನ್ನು ಅಲ್ಲಾಹನ ಸ್ಮರಣೆಯಿಂದಲೂ ನಮಾಝಿನಿಂದಲೂ ತಡೆಯಲಿಕ್ಕೂ ಇಚ್ಛಿಸುತ್ತಾನೆ. ಇನ್ನಾದರೂ ನೀವು ಅವುಗಳನ್ನು ತ್ಯಜಿಸುವಿರಾ?” (ಕುರಾನ್ ಸೂರಾ ಅಲ್ ಮಾಇದಃ 91)

ಈ ಸಂದೇಶ ಕೇಳಿದ ಕೂಡಲೇ, ಜನರು ತಾವು ಮದ್ಯಪಾನ ಮಾಡುತ್ತಿದ್ದರೆ ಬಾಯಿಯಿಂದ ಹೊರಹಾಕಿದರು, ಮನೆಗಳಲ್ಲಿ ಸಂಗ್ರಹಿಸಿದ ಮದ್ಯದ ಪಾತ್ರೆಗಳನ್ನು ಒಡೆದು ಹಾಕಿದರು, ಇದರಿಂದ ಮದೀನಾದ ಬೀದಿಗಳಲ್ಲಿ ಮದ್ಯದ ಹೊಳೆಯೇ ಹರಿದದ್ದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಘಟನೆಯು ನಮಗೊಂದು ಪಾಠ ಕಲಿಸುತ್ತದೆ: ಪ್ರವಾದಿಯ (ಸ.ಅ.) ಸಂದೇಶಗಳು ಅದೆಷ್ಟು ಪ್ರಬಲವಾಗಿದ್ದವು? ಆ ಸಂದೇಶಗಳನ್ನು ಅನುಸರಿಸುವ ಮನೋಬಲ ಎಷ್ಟೊಂದು ಶಕ್ತಿಶಾಲಿಯಾಗಿತ್ತು? ಎಂಬುದಾಗಿದೆ.

ಈ ಸಂದೇಶವು ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ? ಎಂಬುದನ್ನು ನಾವು ಅವಲೋಕಿಸಿಕೊಂಡಾಗ, ನಮ್ಮ ಸಮಾಜದಲ್ಲಿ, ನಶಾ ಪದಾರ್ಥಗಳು, ಮದ್ಯಪಾನ, ಹಾಗೂ ಅನೇಕ ಸಮಸ್ಯೆಗಳು ವ್ಯಾಪಕವಾಗಿ ಕಂಡು ಬರುತ್ತಿವೆ. ಇವು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ತಂದೊಡ್ಡುವ  ಸಮಸ್ಯೆಗಳಲ್ಲ, ಕುಟುಂಬಗಳ ಶಾಂತಿಗೆ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳ ಅಧಪತನಕ್ಕೆ ಕಾರಣವನ್ನುಂಟು ಮಾಡಿ ಸಮಾಜ‌‌‌ದ ಸ್ವಾಸ್ಥ್ಯ ಹದಗೆಡಿಸುತ್ತವೆ. ಮತ್ತು  ದೊಡ್ಡ ಪ್ರಮಾಣದ ತೊಂದರೆಗಳಿಗೆ ಕಾರಣ ಆಗಿವೆ.

ಪ್ರವಾದಿ (ಸ) ಅವರ ಕಾಲದಲ್ಲಿ ಅವರು ಈ ವ್ಯಸನವನ್ನು ನಿರ್ಬಂಧಿಸಿದರು, ಮತ್ತು ಜನರು ತಕ್ಷಣವೇ ಅದನ್ನು ಪಾಲಿಸಿದರು. ಇಂದು, ನಾವು ಆ ಧಾರ್ಮಿಕ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದರೂ, ನಮ್ಮ ಬದುಕಿನಲ್ಲಿ ಪ್ರವಾದಿಯ (ಸ) ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ಅಳವಡಿಸುತ್ತಿದ್ದೇವೆ ಎಂಬುದು ಪ್ರಶ್ನಾರ್ಥಕವಾಗಿದೆ.

ಈದ್ ಮಿಲಾದುನ್ನಬಿ ಕೇವಲ ಜನ್ಮದಿನಾಚರಣೆಯಲ್ಲ, ಇದು ಪ್ರವಾದಿ ಮುಹಮ್ಮದ್ (ಸ)ರನ್ನು ನಾವೆಷ್ಟು ಅರಿತುಕೊಂಡಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಳ್ಳುವ ದಿನ. ಪ್ರವಾದಿ (ಸ) ಅವರ ಜೀವನ ಶೈಲಿಯನ್ನು ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವೆಷ್ಟರ ಮಟ್ಟಿಗೆ ಪಾಲಿಸುತ್ತಿದ್ದೇವೆ ಎಂಬುದನ್ನು ಒರೆಗೆ ಹಚ್ಚುವ ದಿನ. ಪ್ರವಾದಿಯ (ಸ) ಜೀವನವು ಧರ್ಮ, ರಾಜಕೀಯ, ವ್ಯಾಪಾರ, ಹಾಗೂ ಕುಟುಂಬ ಜೀವನದ ಎಲ್ಲ ಹಂತಗಳಲ್ಲಿ ಮಾರ್ಗದರ್ಶನ ನೀಡುವ ಮಾದರಿಯಾಗಿದೆ. ಅವರು ಮನುಕುಲಕ್ಕೆ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಮದ್ಯಪಾನ, ಭ್ರಷ್ಟಾಚಾರ, ಮತ್ತು ಅಪಮೌಲ್ಯೀಕರಣಕ್ಕೆ, ಇಂದಿನ ಆಧುನಿಕ ಸಾಮಾಜಿಕ ಬಿಕ್ಕಟ್ಟಿಗೆ ಸಮರ್ಪಕ ಪರಿಹಾರ ಒದಗಿಸುತ್ತವೆ.

ಆದರೆ, ನಾವು ಈ ಸಂದೇಶಗಳನ್ನು ಹೇಗೆ ಅನುಸರಿಸುತ್ತಿದ್ದೇವೆ? ಈದ್ ಮಿಲಾದುನ್ನಬಿ ಆಚರಣೆ ಕೇವಲ ಸೆಲಬರೇಷನ್(ಆಚರಣೆ) ಮಾತ್ರ ಆಗಿದ್ದರೆ, ಅದು ನಿಜವಾದ ಸಾರ್ಥಕತೆ ಅಲ್ಲ. ಜನ್ಮದಿನ ಆಚರಿಸಬೇಕಾದ ನಾವು ಅವರ ಜೀವನದ ಪಾಠಗಳನ್ನು ಅಳವಡಿಸಿಕೊಳ್ಳಬೇಕು. ಪ್ರವಾದಿ (ಸ) ರು ಶಾಂತಿ, ಪ್ರೀತಿ, ಸತ್ಯ ಮತ್ತು ಮಾನವೀಯತೆಯ  ಸಂದೇಶಗಳನ್ನು ತಮ್ಮ ಜೀವನದ ಮೂಲಕ ವ್ಯಕ್ತಪಡಿಸಿದರು. ಅವರೊಬ್ಬ ಜೀವಂತ ಉದಾಹರಣೆಯಾಗಿ ಬದುಕಿದರು.

ಪ್ರವಾದಿ ಮುಹಮ್ಮದ್ (ಸ) ರ ಆದರ್ಶ ಜೀವನವು ನಮಗೆ ಶಾಶ್ವತವಾದ ಪಾಠಗಳನ್ನು ಕಲಿಸುತ್ತದೆ. ಇವುಗಳನ್ನು ನಮ್ಮ ಪ್ರಸ್ತುತ ಪರಿಸ್ಥಿತಿಗೆ ಹೊಂದಿಸಿ ಅನುಸರಿಸಿದರೆ, ನಮ್ಮ ಜೀವನದಲ್ಲಷ್ಟೇ ಅಲ್ಲದೆ, ಇಡೀ ಮಾನವ ಕುಲದಲ್ಲಿ ಶ್ರೇಷ್ಠ ಬದಲಾವಣೆ ತರುವ ಸಾಧ್ಯತೆ ಮತ್ತು ಸಾಮರ್ಥ್ಯ ಎರಡೂ ಇದೆ.
 

 

Read These Next

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...