ಪ್ರಕೃತಿಯ ಮಡಿಲಲ್ಲಿ ಧುಮ್ಮಿಕ್ಕುತ್ತಿದೆ ಅಮ್ಮುಂಜೆಯ ಕಲ್ಲಕೆರೆ ಫಾಲ್ಸ್

Source: SO News | By Laxmi Tanaya | Published on 28th June 2021, 9:31 PM | Coastal News | Tour |

ಮಂಗಳೂರು: ಕಡಿದಾದ ದಾರಿಯ ಇಕ್ಕೆಲಗಳಲ್ಲಿ ಬಣ್ಣ-ಬಣ್ಣದ ಹೂವು, ಜೀವ ವೈವಿಧ್ಯಗಳನ್ನು ನೋಡುತ್ತಾ, ಸುರಿಯುವ ಮಳೆಯ ಜತೆ ಹೆಜ್ಜೆ ಹಾಕುವುದೇ ರೋಚಕ.
ಕಾಡಿನ ಮಧ್ಯೆ ಜಲಪಾತಗಳ ಭೋರ್ಗರೆತದ ಸದ್ದು ಪ್ರಕೃತಿ ಪ್ರಿಯರನ್ನು ತಮ್ಮನ್ನ ಸೆಳೆಯುತ್ತವೆ. ಹೀಗೆ ಮಳೆಗಾಲದಲ್ಲಿ ಕಾಡುಗಳ ನಡುವೆ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಸೊಗಸು.

 ಕೆಲವು ಜಲಪಾತಗಳು ಅಷ್ಟೇನೂ ಖ್ಯಾತವಾಗಿಲ್ಲವಾದರೂ ಸೌಂದರ್ಯದಲ್ಲಿ ಮಾತ್ರ ಯಾವುದಕ್ಕೂ ಸರಿಸಾಟಿ ಇಲ್ಲ. ಅಂತಹ ಕೆಲವು ಜಲಪಾತಗಳಿವೆ. ಅದರಲ್ಲೂ  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮುಡಾಯಿಕೋಡಿ ಸಮೀಪದಲ್ಲಿದೆ ಈ ಫಾಲ್ಸ್.

'ಕಲ್ಲಕೆರೆ ಫಾಲ್ಸ್' ಎಂದೇ ಪ್ರಸಿದ್ದಿ ಪಡೆದಿದೆ. ಈ ಫಾಲ್ಸ್ ಹಾಲಿನ ರೂಪದಲ್ಲಿ ಹರಿಯುತ್ತಾ ಇದೆ. ಮಳೆಗಾಲ ಬಂತಂದ್ರೆ ಸಾಕು, ಇದನ್ನು ನೋಡುವುದೇ ಚೆಂದ. ಇನ್ನೂ ಫಾಲ್ಸ್ ನಲ್ಲಿ ಎಂಜಾಯ್ ಮಾಡಲು ಯುವಕರು  ತಂಡೋಪತಂಡವಾಗಿ ಆಗಮಿಸಿ ಮಸ್ತ್ ಮಸ್ತಾಗಿ ಎಂಜಾಯ್ ಮಾಡುತ್ತಿದ್ದಾರೆ.

Read These Next

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಕೋಲಾರ:ವಿವಿಧ ಸಂಘಟನೆಗಳ ವತಿಯಿಂದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ

 ಪ್ರತಿ ಹಳ್ಳಿಗಳಲ್ಲಿರುವ ಕಲಾವಿದರುಗಳನ್ನು ಇಲಾಖೆ ಮತ್ತು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ - ಜಿ. ಮುನಿಕೃಷ್ಣ