ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಘಟಿಕೋತ್ಸವ; 439 ವಿದ್ಯಾರ್ಥಿಗಳಿಗ ಪದವಿ ಪ್ರದಾನ

Source: S O News | By I.G. Bhatkali | Published on 1st December 2022, 12:49 PM | Coastal News | Gulf News | Don't Miss |

ಅಜ್ಮಾನ್: ಅಜ್ಮಾನ್ ಅಲ್ ಜುರ್ಫ್ ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ ಮಂಗಳವಾರ ನಡೆದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂ ಯು)ಯ 19ನೇ ಘಟಿಕೋತ್ಸವದಲ್ಲಿ ಯುಎಇಯ ಸುಪ್ರೀಂ ಕೌನ್ಸಿಲ್‌ನ ಸದಸ್ಯ ಹಾಗೂ ಅಜ್ಞಾನ್‌ನ ಆಡಳಿತಗಾರ ಶೈಖ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ 439 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಈ ಸಂದರ್ಭ ದಲ್ಲಿ ಮಾತನಾಡಿದ ಅವರು, ಕಲಿಕೆಯನ್ನು ಮುಂದುವರಿಸಬೇಕು. ಇದು ವೃತ್ತಿ ಜೀವನದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಇರುವ ಏಕೈಕ ದಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಎಂಯು ದಿಂದ ಪಡೆದುಕೊಂಡ ಜ್ಞಾನವನ್ನು ಉತ್ತಮ ಜಗತ್ತು ನಿರ್ಮಾಣ ಮಾಡಲು ಬಳಸು ವಂತೆ ಅವರು ಕರೆ ನೀಡಿದರು.

ಜಿಎಂಯು ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ, ಸ್ಥಾಪಕ ಡಾ.ತುಂಬೆ ಮೊಯ್ದಿನ್, ಸಂಸ್ಥೆಗೆ ನಿರಂತರ ಬೆಂಬಲ ನೀಡುತ್ತಿರುವ ಸರಕಾರ, ಶೈಖ್ ಹುಮೈದ್ ಬಿನ್ ರಶೀದ್ ಅಲ್ ನುಐಮಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಜಿಎಂಯು ಕುಲಾಧಿಪತಿ ಹುಸ್ಸಾಮ್ ಹಮ್ದಿ ಮಾತನಾಡಿ ನಮ್ಮ ಪದವೀಧರರನ್ನು ಅವರ ಕಠಿಣ ಪರಿಶ್ರಮ ಹಾಗೂ ದೃಢತೆಗಾಗಿ ಅಭಿನಂದಿಸಲು ಬಯಸುತ್ತೇನೆ. ಅವರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದರು.

ವೈದ್ಯಕೀಯ ಕಾಲೇಜಿನ 154, ದಂತ ಕಾಲೇಜು 68, ಫಾರ್ಮಸಿಯ 42, ಆರೋಗ್ಯ ವಿಜ್ಞಾನ ಕಾಲೇಜು 125, ನರ್ಸಿಂಗ್ ಕಾಲೇಜು 38, ಆರೋಗ್ಯ ಸೇವೆ ನಿರ್ವಹಣೆ ಹಾಗೂ ಅರ್ಥಶಾಸ್ತ್ರ ಕಾಲೇಜಿನ 12 ಪದವೀಧರರು ಸೇರಿದಂತೆ ಒಟ್ಟು 439 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

Read These Next

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ಸಿ.ಎ.ಖಲೀಲ್ ಸಾಹೇಬರ ನಿಧನಕ್ಕೆ ಭಟ್ಕಳದ ಐದು ಕೇಂದ್ರಿಯ ಸಂಘಟನೆಗಳಿಂದ ಜಂಟಿ ಸಂತಾಪ ಸಭೆ

ಭಟ್ಕಳ: ಇಫ್ತಿಖಾರ್-ಇ-ಖೌಮ್ ಬಿರುದಾಂಕಿತ, ಪ್ರಸಿದ್ಧ ಉದ್ಯಮಿ ಮತ್ತು ಸಮಾಜ ಸೇವಕ ಸೈಯ್ಯದ್ ಖಲೀಲರ‍್ರಹ್ಮಾನ್ (ಸಿ.ಎ. ಖಲೀಲ್) ಅವರ ...

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...