ಭಟ್ಕಳದಲ್ಲಿ ಏಳು ತಿಂಗಳ ಮಗು ಅಪಹರಣ:ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Source: S O News | By MV Bhatkal | Published on 26th June 2024, 7:59 AM | Coastal News | Don't Miss |

ಭಟ್ಕಳ: ದಾಂಡೇಲಿಯಿಂದ ಭಟ್ಕಳಕ್ಕೆ ಮಾತನಾಡಲೆಂದು ಕರೆಯಿಸಿ ಏಳು ತಿಂಗಳ ಮಗುವನ್ನು ಅಪಹರಣ ಮಾಡಿರುವ ಘಟನೆಯೊಂದು ಭಟ್ಕಳದಲ್ಲಿ ನಡೆದಿದೆ. ಈ ಕುರಿತಂತೆ ಮಗುವಿನ ತಂದೆ ಭಟ್ಕಳ ಪೊಲೀಸ್‌ ಠಾಣೆಯಲ್ಲಿ  ಅಪಹರಣ ದೂರು ದಾಖಲಿಸಿದ್ದಾರೆ.

ಮಗುವಿನ ತಂದೆ ಸಲ್ಲಿಸಿದ ದೂರಿನಲ್ಲಿ ಓರ್ವ ಗಂಡಸು ಹಾಗೂ ಇಬ್ಬರು ಹೆಂಗಸರು ದಾಂಡೇಲಿಯ ನಮ್ಮ ಮನೆಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡು ಹೋಗಿದ್ದರು. ಕೆಲವು ದಿನಗಳ ನಂತರದಲ್ಲಿ ಅವರು ನನಗೆ ಕರೆ ಮಾಡಿ ಭಟ್ಕಳಕ್ಕೆ ಒಮ್ಮೆ ಬಂದು ಹೋಗುವಂತೆ ಒತ್ತಾಯ ಮಾಡಿದ್ದರು. ನಾವು ಕೂಡ ಅದರಂತೆ ಜೂನ್ 18 ರಂದು ರಾತ್ರಿ ಭಟ್ಕಳದ ಆಲ್ ಖಲೀಜ್ ಹೋಟೆಲ್ ಬಳಿ ಬಂದು ದೂರವಾಣಿ ಕರೆ ಮಾಡಿದಾಗ ಮೂವರು ಬಂದು ನಮ್ಮನ್ನು ಮಾತನಾಡಿಸಿ ತನ್ನ ಹೆಂಡತಿ ಬಳಿ ಇದ್ದ 7 ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ ಎಂದು ಹೋದರು. ನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಸ್ವಲ್ಪ ಸಮಯದ ನಂತರ ನಮ್ಮ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೊರಿಸಿ ಮಗು ಆರಾಮವಾಗಿ ಇರುವುದಾಗಿ ಹೇಳಿದ್ದಾರೆ. ಆದರೆ ತಮ್ಮ ಮಗುವನ್ನು ಮಾತ್ರ ಮರಳಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಮಗುವಿನ ಅಪಹರಣ ಮಾಡಿರುವ ಕುರಿತು ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read These Next

ಖಾಸಗಿ ಬಸ್ಸಿನಲ್ಲಿ ಸಹ ಪ್ರಯಾಣಿಕರು ಹಾಗೂ ಚಾಲಕನಿಂದ ಭಟ್ಕಳದ ಯುವಕನಿಗೆ ಥಳಿತ; ಭಟ್ಕಳದಲ್ಲಿ ಬಸ್ ತಡೆದು ಪ್ರತಿಭಟನೆಗೆ ಯತ್ನ

ಹೈದರಾಬಾದಿನಿಂದ ಮಂಗಳೂರಿಗೆ  ಬರುತ್ತಿರುವ ಖಾಸಗಿ ಓಲ್ವೋ  ಸ್ಲೀಪರ್ ಬಸ್ಸಿನಲ್ಲಿ ಗಂಗಾವತಿ ಬಳಿ ಭಟ್ಕಳದ ಯುವಕನ ಮೇಲೆ ಸೋಮವಾರದಂದು ...

ಭಟ್ಕಳದಲ್ಲಿ ಕರಾಟೆ ರೆಫ್ರಿ ತರಬೇತಿ; ತಪ್ಪು ನಿರ್ಣಯಗಳಿಂದ ಸ್ಪರ್ಧಾಳುವಿನ ಭವಿಷ್ಯ ಮಣ್ಣುಪಾಲಾಗುತ್ತದೆ-ಜೋಸ್

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಇಲ್ಲಿನ ಬಂದರ್ ರಸ್ತೆಯ ಕಮಲಾವತಿ ರಾಮನಾಥ ಶಾನಭಾಗ ...

ಸಚಿವ ವೈದ್ಯರ ಗೃಹ ಕಚೇರಿಯಲ್ಲಿ ಜನತಾ ದರ್ಶನ; ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ರಾಜಿಯಿಲ್ಲ ಎಂದ ಸಚಿವ

ಭಟ್ಕಳ: ಜನರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮುರುಢೇಶ್ವರದ ತಮ್ಮ ಸ್ವಗೃಹದಲ್ಲಿ ...