ಭಟ್ಕಳ: ಕಾಡಿನಲ್ಲಿರಬೇಕಾದ ಕಾಡು ಹಂದಿಗಳೆರಡು ನಾಡಿಗೆ ಬಂದು ಪೇಚಿಗೆ ಸಿಲುಕಿಕೊಂಡ ಪ್ರಸಂಗ ಭಟ್ಕಳದ ಪಟ್ಟಣದಲ್ಲಿ ಸಂಭವಿಸಿದೆ.
ಎರಡು ಕಾಡು ಹಂದಿಗಳು ಮುಖ್ಯ ರಸ್ತೆಯ ಮನೆಯೊಂದರ ಆವರಣದೊಳಕ್ಕೆ ಬಂದಿದ್ದು ಮನೆಯವರ ಆತಂಕಕ್ಕೆ ಕಾರಣವಾಯಿತು. ಮೊದಲು ಅವುಗಳನ್ನು ಓಡಿಸಲು ನೋಡಿದರೂ ಸಹ ಅವುಗಳು ಇವರ ಮೇಲೆಯೇ ದಾಳಿ ಮಾಡಲು ಮುಂದಾಗುತ್ತಿದ್ದಂತೆಯೇ ಅರಣ್ಯ ಇಲಾಖೆಗೆ ಕರೆ ಮಾಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲ|ಆಖೆಯ ಸಿಬ್ಬಂದಿಗಳು ಒಂದು ಹಂದಿಯನ್ನು ಬಲೆ ಹಾಕಿ ಹಿಡಿಯುವಲ್ಲಿ ಯಶಸ್ವೀಯಾದರು. ಅಷ್ಟರಲ್ಲಿಯೇ ಇನ್ನೊಂದು ತಪ್ಪಿಸಿಕೊಂಡು ಹೋಗಿದೆ ಎನ್ನಲಾಗಿದೆ. ನಗರ ಮಧ್ಯದಲ್ಲಿ ಹಂದಿಗಳ ಓಡಾಟದಿಂದ ಜನರು ಭಯಭೀತರಾಗಿದ್ದು ಇನ್ನೊಂದು ಹಂದಿ ಎಲ್ಲಿ ಅಡಗಿ ಕುಳಿತಿದೆಯೋ ಎನ್ನುವ ಭಯ ಕೂಡಾ ಕಾಡುತ್ತಿದೆ.