ಭಟ್ಕಳ: ಕೃಷಿಕನೋರ್ವ ಆಕಸ್ಮಿಕವಾಗಿ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಸಾವು

Source: S O News | By MV Bhatkal | Published on 4th October 2024, 12:49 AM | Coastal News |

ಭಟ್ಕಳ: ಮಂಗಳವಾರದಂದು ಕೃಷಿಕನೋರ್ವ ತೋಟದಲ್ಲಿ ಕೆಲಸ ಮುಗಿಸಿ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾದವರ ಮೃತ ದೇಹ ಗುರುವಾರ ಬೆಳ್ಳಿಗ್ಗೆ ಪತ್ತೆಯಾಗಿರುವ ಘಟನೆ ಮಾರುಕೇರಿ ಪಂಚಾಯತ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ವ್ಯಕ್ತಿ ರಾಮಯ್ಯ ಕೃಷ್ಣ ಗೊಂಡ (52) ಎಂದು ತಿಳಿದು ಬಂದಿದೆ. ಈತ ಮಂಗಳವಾರದಂದು ತನ್ನ ತೋಟದ ಕೆಲಸಕ್ಕೆ ಹೋಗಿ  ಸಂಜೆ  ವೇಳೆ ಕೆಲಸ ಮುಗಿಸಿ ಕೆಜ್ಜಿಲು ಬಾಳೆ ಹೊಳೆಯಲ್ಲಿ ಕೈ ಕಾಲು ಮುಖ ತೊಳೆಯಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾಗಿದ್ದರು. ಬಳಿಕ ಮೃತ ದೇಹದ ಪತ್ತೆಗೆ ಅಗ್ನಿಶಾಮಕ ದಳದ ಸಿಬ್ಬಂದಿ  ಸ್ಥಳಕ್ಕೆ ಬಂದು ಶೋದ ಕಾರ್ಯ ನಡೆಸಿದರು ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಬೆಳ್ಳಿಗ್ಗೆ ಅದೇ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ನಂತರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಯ  ಮಾಡಲಾಗಿದೆ.

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತನ ಸಹೋದರ ಮಾಸ್ತಿ ಗೊಂಡ ದೂರು ನೀಡಿದ್ದು.ಗ್ರಾಮೀಣ ಠಾಣೆಯ ಎ. ಎಸ್.ಐ ಕೃಷ್ಣನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Read These Next

ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರ್ಸಿ ತಾಲೂಕಿನ ಮಾರಿಕಾಂಬಾ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ...

ರಾಷ್ಟ್ರ ಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಬೆಳಕೆ ನಾಗೇಂದ್ರ ನಾಯ್ಕ ತೃತೀಯ ಸ್ಥಾನ

೪ನೇ ಭಾರತೀಯ ಓಪನ್ ಯು-೨೩ ಅಥ್ಲೆಟಿಕ್ಸ್ ಸ್ಪರ್ಧೆ ೨೦೨೪ರ ಜೂನಿಯರ್ ಮತ್ತು ಅಂಡರ್ -೨೩ ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ...