ಶಿರೂರು ಗುಡ್ಡ ಕುಸಿತ ದುರಂತದಲ್ಲಿ  ನಾಪತ್ತೆಯಾದ ಹತ್ತು ಮಂದಿಯಲ್ಲಿ 6 ಮೃತದೇಹಗಳು ಪತ್ತೆ

Source: SOnews | By Staff Correspondent | Published on 18th July 2024, 3:19 PM | Coastal News |

 

ಕಾರವಾರ: ಅಂಕೋಲಾ ಶಿರೂರು ಮಣ್ಣು ಕುಸಿತ ಪ್ರಕರಣದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿರುವ ಬಗ್ಗೆ ದೂರುಗಳು ಬಂದಿದ್ದು ಪೈಕಿ 6 ಮೃತದೇಹಗಳು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸ್ಪಷ್ಟಪಡಿಸಿದ್ದಾರೆ

ಶಿರೂರು ಪ್ರಕರಣದಲ್ಲಿ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ಇಟ್ಟುಕ್ಕೊಂಡಿದ್ದ ಒಂದೇ ಕುಟುಂಬದ ಐದು ಮಂದಿ, ಉಳುವರೆಯ ಓರ್ವ ಮಹಿಳೆ ಹಾಗೂ ಮೂರು ಟ್ಯಾಂಕರ್ ಚಾಲಕರು ಹಾಗೂ ಓರ್ವ ಕಟ್ಟಿಗೆ ಸಾಗಾಟ ಲಾರಿ ಚಾಲಕ ಮಿಸ್ ಆಗಿರುವ ಬಗ್ಗೆ ದೂರುಗಳು ಬಂದಿತ್ತು. ಪೈಕಿ ಒಂದೇ ಕುಟುಂಬ ನಾಲ್ವರ ಮೃತದೇಹ ಪತ್ತೆಯಾಗಿದ್ದು ಇನ್ನು ಓರ್ವರು ಪತ್ತೆಯಾಗಬೇಕಿದೆ. ಇಬ್ಬರು ಚಾಲಕರ ಮೃತದೇಹ ಪತ್ತೆಯಾಗಿದ್ದು ಅದರಲ್ಲಿ ಓರ್ವ ಮೃತದೇಹದ ಗುರುತು ಪತ್ತೆಯಾಗಿದೆ. ಟ್ಯಾಂಕರ್ ಲಾರಿ ಚಾಲಕ ತಮಿಳುನಾಡು ಮೂಲದ ಚಿನ್ನನನ್(56) ಮೃತಪಟ್ಟವರಾಗಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರದ ಪ್ರತಿಯನ್ನು ವಿತರಿಸಲಾಗಿದೆ ಎಂದರು.

ಒಟ್ಟು ಮೂರು ಟ್ಯಾಂಕರ್ ಗಳು ಹಾಗೂ ಒಂದು ಲಾರಿ ನಾಪತ್ತೆಯಾಗಿತ್ತು. ಪೈಕಿ ಒಂದು ಎಚ್ ಪಿ ಟ್ಯಾಂಕರ್ ನೀರಲ್ಲಿ ಕೊಚ್ಚಿ ಹೋಗಿದೆ. ಇನ್ನು ಎರಡು ಭಾರತ್ ಪೆಟ್ರೋಲಿಯಂ ಟ್ಯಾಂಕರಗಳು ದಡದಲ್ಲಿದ್ದು ಸುರಕ್ಷಿತವಾಗಿವೆ. ಒಂದು ಟಿಂಬರ್ ಲಾರಿ ನಾಪತ್ತೆಯಾಗಿದ್ದು ಜಿ.ಪಿಎಸ್ ಲೊಕೇಶನ್ ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿದೆ ಎಂದರುಇನ್ನು ನದಿಯಲ್ಲಿರುವ ಗ್ಯಾಸ್ ಟ್ಯಾಂಕರ್ ವಿಶೇಷ ತಂಡದಿಂದ ನಿಯಮದಂತೆ ಗಾಳಿಯಲ್ಲಿಯೇ ಬಿಟ್ಟು ಖಾಲಿಮಾಡಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದ ಮನೆಗಳನ್ನು ಖಾಲಿ ಮಾಡಿದ್ದು, ಬೆಂಕಿ, ಮೊಬೈಲ್, ಟಾರ್ಚರ್, ವಾಹನ ಓಡಾಟ ನಡೆಸದಂತೆ ಕಟ್ಟು ನಿಟ್ಟಿನ ಸೂಚನೆ ಕೂಡ ನೀಡಲಾಗಿದೆ. ಸ್ಥಳದಲ್ಲಿ ವಿಶೇಷ ತಂಡದ ಅಧಿಕಾರಿಗಳು ಹೊರತು ಯಾರನ್ನು ಬಿಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Read These Next