ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರನೋರ್ವ ಮತ್ತೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ರ ಬೆವರಿಳಿಸಿದ್ದು, ಒಂದೇ ಓವರ್ ನಲ್ಲಿ 35 ರನ್ ಗಳನ್ನು ಚಚ್ಚಿದ್ದಾರೆ.
ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ರಿಷಬ್ ಪಂತ್ ಮತ್ತು ರವೀಂಜ್ರ ಜಡೇಜಾರ ಅಮೋಘ ಶತಕಗಳ ನೆರವಿನಿಂದ 416 ರನ್ ಗಳನ್ನು ಕಲೆ ಹಾಕಿದ್ದು, ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನ ಅಂತಿಮ ಹಂತದಲ್ಲಿ ಭಾರತ ತಂಡದ ನಾಯಕ ಜಸ್ ಪ್ರೀತ್ ಬುಮ್ರಾ ಅಕ್ಷರಶಃ ಮಾಜಿ ಆಟಗಾರ ಯುವರಾಜ್ ಸಿಂಗ್ ರನ್ನು ನೆನಪಿಸಿದ್ದರು.
2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಪ್ಟೆಂಬರ್ 19ರಂದು ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ 36 ರನ್ ಕಲೆಹಾಕಿದ್ದರು. ಈ ಓವರ್ ನಲ್ಲಿ ಯುವಿ 6 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ್ದರು. ಅಂತಹುದೇ ಓವರ್ ಅನ್ನು ಇಂದು ಬುಮ್ರಾ ನೆನಪಿಸಿದರು.
ಒಂದೇ ಓವರ್ ನಲ್ಲಿ 35 ರನ್
ಇನಿಂಗ್ಸ್ನ 84ನೇ ಓವರ್ ಬೌಲ್ ಮಾಡಿದ ಬ್ರಾಡ್ 35 ರನ್ ನೀಡಿದರು. ಬ್ರಾಡ್ ಎಸೆದ 84ನೇ ಓವರ್ ನ ಮೊದಲ ಎಸೆತವನ್ನೇ ಬುಮ್ರಾ ಬೌಂಡರಿಗೆ ಅಟ್ಟಿದ್ದರು. ಮೊದಲ ಎಸೆತೆದ ವೈಫಲ್ಯದಿಂದ ದೃತ್ತಿಗೆಟ್ಟಿದ್ದ ಬ್ರಾಡ್ ಎರಡನೇ ಎಸೆತವನ್ನು ಬೌನ್ಸರ್ ಎಸೆದರು. ಆದರೆ ದುರಾದೃಷ್ಟವಶಾತ್ ಅದು ಬುಮ್ರಾ ತಲೆ ಮೇಲಿಂದ ಹಾಕಿ ಕೀಪರ್ ಕೈಗೂ ಸಿಗದೇ ಬೌಂಡರಿ ಗೆರೆ ದಾಟಿತ್ತು. ಇದನ್ನು ಅಂಪೈರ್ ವೈಡ್ ಎಂದು ಘೋಷಣೆ ಮಾಡಿದರು. ಹೀಗಾಗಿ ಈ ಎಸೆತದಲ್ಲಿ ಭಾರತಕ್ಕೆ 5ರನ್ ದೊರೆಯಿತು. ಬಳಿಕ ಎಸೆದ ಎಸೆತದಲ್ಲಿ ಬುಮ್ರಾ ಸಿಕ್ಸರ್ ಸಿಡಿಸಿದರೆ ಆ ಎಸೆತವನ್ನು ಅಂಪೈರ್ ನೋಬಾಲ್ ಎಂದು ಘೋಷಣೆ ಮಾಡಿದರು.
ಇಲ್ಲಿ ತಂಡಕ್ಕೆ 7ರನ್ ದೊರೆಯಿತು. ಬಳಿಕ ಬ್ರಾಡ್ ಎಸೆದ ಮೂರು ಎಸೆತಗಳನ್ನು ಬುಮ್ರಾ ನಿರ್ಧಾಕ್ಷೀಣ್ಯವಾಗಿ ಬೌಂಡರಿಗೆ ಅಟ್ಟಿದರು. ಐದನೇ ಎಸೆತದಲ್ಲೂ ಕರುಣೆ ತೋರದ ಬುಮ್ರಾ ಸಿಕ್ಸರ್ ಸಿಡಿಸಿದರು. ಅಷ್ಟು ಹೊತ್ತಿಗಾಗಲೇ ಬ್ರಾಡ್ 34 ರನ್ ನೀಡಿ ಹೈರಾಣಾಗಿದ್ದರು. ಅಂತಿಮ ಎಸೆತದಲ್ಲಿ ಬುಮ್ರಾ 1 ರನ್ ಪಡೆದು ಸ್ಚ್ರೈಕ್ ರೊಟೇಟ್ ಮಾಡಿಕೊಂಡರು. ಆದರೆ ಅಷ್ಟು ಹೊತ್ತಿಗಾಗಲೇ ಬುಮ್ರಾ ಇಂಗ್ಲೆಂಡ್ ವೇಗಿ ಬ್ರಾಡ್ ಬೆವರಿಳಿಸಿದ್ದರು. ಈ ಓವರ್ 2007ರ ಟಿ20 ವಿಶ್ವಕಪ್ ಟೂರ್ನಿಯ ಯುವಿ ಆಟವನ್ನು ನೆನಪಿಸುವಂತೆ ಇತ್ತು.
ಲಾರಾ ದಾಖಲೆ ಮುರಿದ ಬುಮ್ರಾ
ಈ ಅಮೋಘ ಬ್ಯಾಟಿಂಗ್ ಮೂಲಕ ಬುಮ್ರಾ ತಂಡಕ್ಕೆ ನೆರವಾಗಿತ್ತು ಮಾತ್ರವಲ್ಲದೇ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಅವರ 18 ವರ್ಷಗಳ ಹಿಂದಿನ ದಾಖಲೆ ಮುರಿದರು. ಲಾರಾ 2004 ರಲ್ಲಿ ಒಂದು ಓವರ್‌ನಲ್ಲಿ 28 ರನ್ ಗಳಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
- 35 ಜಸ್ರ್ಪೀತ್ ಬುಮ್ರಾ (ಬೌಲರ್ ಸ್ಟುವರ್ಟ್ ಬ್ರಾಡ್) ಬರ್ಮಿಂಗ್ಹ್ಯಾಮ್ 2022
- 28 ಬ್ರಿಯಾನ್ ಲಾರಾ (ಬೌಲರ್ ಆರ್ ಪೀಟರ್ಸನ್) ಜೋಹಾನ್ಸ್‌ಬರ್ಗ್ 2003
- 28 ಜಿ ಬೈಲಿ ಆಫ್ ( ಬೌಲರ್ ಜೆ ಆಂಡರ್ಸನ್) ಪರ್ತ್ 2013
- 28 ಕೆ ಮಹಾರಾಜ್ (ಬೌಲರ್ ಜೆ ರೂಟ್) ಪೋರ್ಟ್ ಎಲಿಜಬೆತ್ 2020
Read These Next
ಗುತ್ತಿಗೆ ಪಡೆಯಲು 2,240 ಕೋಟಿ ರೂ. ಲಂಚ; ಅದಾನಿ ವಿರುದ್ಧ ಅಮೆರಿಕ ಬಂಧನ ವಾರಂಟ್
ಸೌರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಏರ್ಪಡಿಸಲು ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ 265 ಮಿಲಿಯ ಡಾಲರ್ (ಸುಮಾರು 2,240 ಕೋಟಿ ರೂಪಾಯಿ) ...
ದ್ವೇಷ ಭಾಷಣ ದೇಶದ್ರೋಹಿ ಹೇಳಿಕೆಗಿಂತ ಭಿನ್ನ: ಸುಪ್ರೀಂ
ದ್ವೇಷ ಭಾಷಣಗಳನ್ನು ಮಾಡುವವರು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹಾನಿಯನ್ನುಂಟು ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕ್ರಮಗಳನ್ನು ...
ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ
ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...
5.6 ಲಕ್ಷ ಭಾರತೀಯರು ಶ್ರೀಮಂತ ದೇಶಗಳಿಗೆ ವಲಸೆ
ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾದಥ ದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ಭಾರತೀಯರಲ್ಲಿ ಹೆಚ್ಚಿದ್ದು, 2022ರಲ್ಲಿ ಒಟ್ಟು 5.6 ಲಕ್ಷ ಮಂದಿ ...
'ಬುಲ್ಡೋಜರ್ ಅನ್ಯಾಯ'ದ ವಿರುದ್ಧ ಸುಪ್ರೀಂ ಕೆಂಡ: ಸರಕಾರ ನ್ಯಾಯಾಂಗದ ಕೆಲಸ ಮಾಡುವಂತಿಲ್ಲ
ಸುಪ್ರೀಂ ಕೋರ್ಟ್ ಬುಧವಾರ 'ಬುಲ್ಡೋಜರ್ ಅನ್ಯಾಯ;ದ ಪ್ರವೃತ್ತಿಯ ವಿರುದ್ಧ ಕೆಂಡಕಾರಿದೆ.
ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ
ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...
ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು ಗಳಿಸಿದ ಕರ್ನಾಟಕ.
ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...
ವಿವಿ ಫುಟ್ಬಾಲ್ ತಂಡಕ್ಕೆ ಇಬ್ಬರು ಅಂಜುಮನ್ ವಿದ್ಯಾರ್ಥಿಗಳು ಆಯ್ಕೆ.
ಭಟ್ಕಳ: ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಫುಟ್ಬಾಲ್ ತಂಡಕ್ಕೆ ಯೂನಿವರ್ಸಿಟಿ ಬ್ಲೂ ಆಟಗಾರರಾಗಿ ಭಟ್ಕಳದ ಅಂಜುಮನ್ ಪದವಿ ...
ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!
ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!
ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್
ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್
2ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ, ಸರಣಿ ಕೈವಶ
2ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ, ಸರಣಿ ಕೈವಶ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್; ನೀರಜ್ ಚೋಪ್ರಾಗೆ ಐತಿಹಾಸಿಕ ಬೆಳ್ಳಿ
ಹಾಲಿ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊತ್ತ ಮೊದಲ ...