ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Source: S O News | By MV Bhatkal | Published on 4th October 2024, 12:51 AM | Coastal News | Don't Miss |

ಭಟ್ಕಳ: ಶಿರ್ಸಿ ತಾಲೂಕಿನ ಮಾರಿಕಾಂಬಾ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕು ಸತತ 2 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು  ಪಡೆದುಕೊಂಡಿದ್ದು, ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.

ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ 800ಮೀ, 1500 ಮೀ, 3000ಮೀ, 4*400ಮೀ ರೀಲೆ ಮತ್ತು  ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ  ಪಡೆದುಕೊಂಡಿದ್ದಾರೆ. ಪವಿತ್ರ ಮಡಿವಾಳ ಉದ್ದ ಜಿಗಿತದಲ್ಲಿ ಪ್ರಥಮ, 4*100 ಮೀ ರೀಲೆ ಪ್ರಥಮ, ತ್ರಿವಿಧ ಜಿಗಿತದಲ್ಲಿ ದ್ವಿತೀಯ. ಮೋನಿಕಾ ದೇವಾಡಿಗ 400ಮೀ. ದ್ವಿತೀಯ, 4*400 ಮೀ ರೀಲೆ ಪ್ರಥಮ, ಸಿಂಚನಾ ಈಶ್ವರ ನಾಯ್ಕ 800 ಮೀ ಓಟದಲ್ಲಿ ದ್ವಿತೀಯ, 4*400 ಮೀ ರೀಲೆ ಪ್ರಥಮ, ಆಶೀತಾ ವೆಂಕಟೇಶ ನಾಯ್ಕ 1500 ಮೀ. ದ್ವಿತೀಯ, 3000 ಮೀ. ದ್ವಿತೀಯ, 4*400 ಮೀ. ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ದ್ವಿತೀಯ, ಭವ್ಯ ದೇವಾಡಿಗ ಎತ್ತರ ಜಿಗಿತ ಪ್ರಥಮ, 100ಮೀ. ಹರ್ಡಲ್ಸ ದ್ವಿತೀಯ, 4*100 ಮೀ. ರೀಲೆ ಪ್ರಥಮ, ನಂದಿನಿ ನಾಯ್ಕ 400 ಹರ್ಡಲ್ಸ ದ್ವಿತೀಯ, ರೂಪಾಕ್ಷಿ ಮೊಗೇರ ಚಕ್ರ ಎಸೆತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಬಾಲಕರ ವಿಭಾಗದಲ್ಲಿ ಧನರಾಜ ಎನ್. ನಾಯ್ಕ 100 ಮೀ ಓಟದಲ್ಲಿ ಪ್ರಥಮ, ಹಿತೇಶ ಎಮ್. ನಾಯ್ಕ 4*400 ಮೀ ರೀಲೆ ಪ್ರಥಮ, ಗುರುರಾಜ ಗಣಪತಿ ನಾಯ್ಕ 4*400 ಮೀ ರೀಲೆ ಪ್ರಥಮ, ಕೇಶವ ಎಮ್ ನಾಯ್ಕ 4*400 ಮೀ ರೀಲೆ ಪ್ರಥಮ. ದೀಪಕ ಪಿ. ನಾಯ್ಕ 4*400
2 / 2 ಮೀ ರೀಲೆ ಪ್ರಥಮ, .ಲೋಹಿತ್ ಮರಾಠಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ
ಬಾಲಕಿಯರ ವಿಭಾಗದ ಗುಂಪು ಆಟಗಳಾದ ಕಬಡ್ಡಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಹಾಗೂ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.  
ಕರಾಟೆ ಸ್ಪರ್ಧೆಯಲ್ಲಿ ಪ್ರತ್ಯಕ್ಷ ನಾಯ್ಕ, ವಿನುತಾ ನಾಯ್ಕ, ರಾಧಿಕಾ ಗೊಂಡ, ರಕ್ಷಾ ಖಾರ್ವಿ, ಚೆಸ್ ಸ್ಪರ್ಧೆಯಲ್ಲಿ ಅಂಕಿತ ನಾಯ್ಕರ್ ಹಾಗೂ ಜಾಕ್ಷನ್ ಡಿಸೋಜಾ  ಗುಡ್ಡಗಾಡು ಓಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

Read These Next

ರಾಷ್ಟ್ರ ಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಬೆಳಕೆ ನಾಗೇಂದ್ರ ನಾಯ್ಕ ತೃತೀಯ ಸ್ಥಾನ

೪ನೇ ಭಾರತೀಯ ಓಪನ್ ಯು-೨೩ ಅಥ್ಲೆಟಿಕ್ಸ್ ಸ್ಪರ್ಧೆ ೨೦೨೪ರ ಜೂನಿಯರ್ ಮತ್ತು ಅಂಡರ್ -೨೩ ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ...

ನ.೭ ರಂದು ಬೃಹತ್ ಅರಣ್ಯವಾಸಿಗಳ ಬೆಂಗಳೂರು ಚಲೋ: ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ

ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಹಿನ್ನಲೆಯಲ್ಲಿ ರಾಜ್ಯಾದಂತ ...