ದಿಲ್ಲಿ ಗಲಭೆ: ಕಲ್ಲುತೂರಾಟ ಪ್ರಕರಣ; ಉಮರ್, ಸೈಫಿ ಖುಲಾಸೆ
ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಗಳಿಗೆ ಸಂಬಂಧಿ ಸಿದ ಕಲ್ಲು ತೂರಾಟದ ಪ್ರಕರಣದಿಂದ ಜೆಎನ್ ಯುನ ವಿದ್ಯಾರ್ಥಿ ಒಕ್ಕೂಟದ ಮಾಜಿ ನಾಯಕ ಉಮರ್ ಖಾಲಿದ್ ಹಾಗೂ 'ಯುನೈಟೆಡ್ ಎಗೈನ್‌ಸ್ ಹೇಟ್'ನ ಸ್ಥಾಪಕ ಖಾಲಿದ್ ಸೈಫಿಯನ್ನು ದಿಲ್ಲಿಯ ಕಾರ್ಕಾರ್ಡೂಮ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.
ಹೆಚ್ಚುವರಿ ಸತ್ರ ನ್ಯಾಯಾಧೀಶ ಪುಲಸ್ಯ ಪ್ರಮಾಚಲ ಅವರು ಉಮರ್ ಖಾಲಿದ್ ಹಾಗೂ ಉಮರ್ ಸೈಫಿಯನ್ನು ಕಲ್ಲು ತೂರಾಟದ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಿದರು. ಆದರೆ, ಗಲಭೆಯ ಹಿಂದಿನ ಅತಿ ದೊಡ್ಡ ಪಿತೂರಿ ಆರೋಪಕ್ಕೆ ಸಂಬಂಧಿಸಿ ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಅವರು ಕಾರಾಗೃಹದಿಂದ ಬಿಡುಗಡೆಯಾಗಲು ಸಾಧ್ಯವಿಲ್ಲ.
2020 ಫೆಬ್ರವರಿ 24ರಂದು ಈಶಾನ್ಯ ದಿಲ್ಲಿಯ ಚಾಂದ್ ಬಾಗ್ ಪುಲಿಯಾ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದ ಗುಂಪಿನಲ್ಲಿ ಉಮರ್ ಖಾಲಿದ್ ಹಾಗೂ ಉಮರ್ ಸೈಫಿ ಪಾಲ್ಗೊಂಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಅವರು ಗುಂಪಿನ ಭಾಗವಾಗಿರಲಿಲ್ಲ.